ಆತ್ಮಹತ್ಯೆಗೆ ಯತ್ನ ಚಾಲಕನ ರಕ್ಷಣೆ
ಮುಂಬೈ,ಅ.೧೭-ಅಟಲ್ ಬಿಹಾರಿ ವಾಜಪೇಯಿ ಟ್ರಾನ್ಸ್ ಹಾರ್ಬರ್ ಲಿಂಕ್ ಬ್ರಿಡ್ಜ್ (ಅಟಲ್ ಸೇತು)ದಿಂದ ಸಮುದ್ರಕ್ಕೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಲುಂಡ್ ನಿವಾಸಿ ರೀಮಾ ಮುಖೇಶ್ ಪಟೇಲ್ (೫೬) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ.
ಮುಂಬೈನ ೫೬ ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ನಿನ್ನೆ (ಆಗಸ್ಟ್ ೧೬) ಸಂಜೆ ೭ ಗಂಟೆಗೆ ಅಟಲ್ ಸೇತು ಸೇತುವೆಯಿಂದ ನಡೆದುಕೊಂಡು ಹೋಗಿದ್ದಾಳೆ. ಇದನ್ನು ಕಂಡ ಟ್ಯಾಕ್ಸಿ ಚಾಲಕನೊಬ್ಬ ತನ್ನ ಕಾರು ನಿಲ್ಲಿಸಿ ಆಕೆಯೊಂದಿಗೆ ಮಾತುಕತೆ ನಡೆಸಿದ್ದಾನೆ. ಅಷ್ಟರಲ್ಲಿ ಆ ಮಾರ್ಗವಾಗಿ ಬಂದ ಗಸ್ತು ತಿರುಗುತ್ತಿದ್ದ ಪೊಲೀಸರು ಅವರ ಕಾರನ್ನು ನಿಲ್ಲಿಸಿದ್ದಾರೆ, ಅವರು ಬರುವಷ್ಟರಲ್ಲಿ ಮಹಿಳೆ ಸೇತುವೆಯಿಂದ ಜಿಗಿದಿದ್ದಾಳೆ.
ಸೇತುವೆಯ ಈ ಬದಿಯಲ್ಲಿ ಮಹಿಳೆಯ ಬಳಿ ನಿಂತಿದ್ದ ಟ್ಯಾಕ್ಸಿ ಚಾಲಕ ಒಂದು ಕೂಡ ಸೆಕೆಂಡ್ ವ್ಯರ್ಥ ಮಾಡದೆ ತಕ್ಷಣವೇ ಕೆಳಗೆ ಬೀಳಲು ಮುಂದಾಗಿದ್ದ ಮಹಿಳೆಯ ಕೂದಲು ಹಿಡಿದು ಕೊಂಡಿದ್ದಾನೆ, ಅಷ್ಟರಲ್ಲೇ ಓಡಿ ಬಂದ ಪೊಲೀಸರು ಕೆಳಗೆ ಬೀಳದ ಮಹಿಳೆಯನ್ನು ಮೇಲೆ ಎಳೆದು ತಂದು ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕಾರು ಚಾಲಕ ಹಾಗೂ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಪ್ರಶಂಸೆ ವ್ಯಕ್ತವಾಗಿದೆ.
ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ಸಮುದ್ರಕ್ಕೆ ಹಾರಲು ಮುಂದಾಗಿದ್ದರು. ಆದರೆ ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಕಾಲದಲ್ಲಿ ಆಕೆಯನ್ನು ತಡೆದು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.