ವಿನೇಶ್ ಫೈನಲ್ ತಲುಪಿದ್ದು ಹೆಮ್ಮೆಯ ಕ್ಷಣ: ಮೋದಿ
ನವದೆಹಲಿ. ಆ.೧೬- ಕುಸ್ತಿಪಟು ವಿನೇಶ್ ಫೋಗಟ್ ಧೈರ್ಯವಂತೆ ಮಗಳು ಅವರು ಫೈನಲ್ ತಲುಪಿದ್ದು ಹೆಮ್ಮೆ ಕ್ಷಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳಾ ಕುಸ್ತಿ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ ತಲುಪಿದ ಭಾರತದ ಮೊದಲ ಕುಸ್ತಿಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದರು.
೭೮ನೇ ಸ್ವತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್ ಒಲಿಂಪಿಕ್ಸ್ ಅಥ್ಲೀಟ್‌ಗಳ ಜತೆ ಸಂವಾದ ನಡೆಸಿದರು. ಸಂವಾದದ ವೇಳೆ ವಿನೇಶ್ ಫೋಗಟ್ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದರು. ವಿನೇಶ್ ಫೋಗಟ್ ಧೈರ್ಯವಂತೆ ಅವರು ಫೈನಲ್‌ಗೆ ಹೋಗಿದ್ದು ಹೆಮ್ಮೆಯ ಕ್ಷಣವಾಗಿದೆ ಎಂದರು.