ಮನೀಶ್ ಪಾದಯಾತ್ರೆ ಮುಂದೂಡಿಕೆ
ನವದೆಹಲಿ,ಅ.೧೪-ದೆಹಲಿಯ ಆಮ್ ಆದ್ಮಿ ಪಕ್ಷವು ಇಂದಿನಿಂದ ಪ್ರಾರಂಭವಾಗಬೇಕಿದ್ದ ಮನೀಶ್ ಸಿಸೋಡಿಯಾ ಅವರ ಪಾದಯಾತ್ರೆಯನ್ನು ಎರಡು ದಿನಗಳವರೆಗೆ ಮುಂದೂಡಿದೆ.
ಮುಂದಿನ ವರ್ಷ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಇಂದು ಆಗಸ್ಟ್ ೧೪ ಬುಧವಾರದಂದು ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಪಾದಯಾತ್ರೆಯೊಂದಿಗೆ ಚುನಾವಣಾ ಪ್ರಚಾರವನ್ನು ಆರಂಭಿಬೇಕಿತ್ತು.ಆದರೆ ಪಾದಯಾತ್ರೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಮಾಹಿತಿಯನ್ನು ಲೋಕೋಪಯೋಗಿ ಸಚಿವ ಸೌರಭ್ ಭಾರದ್ವಾಜ್ ಹಂಚಿಕೊಂಡಿದ್ದಾರೆ. ಈ ಪಾದಯಾತ್ರೆಯನ್ನು ಎರಡು ದಿನಗಳ ಕಾಲ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ದೃಷ್ಟಿಯಿಂದ ದೆಹಲಿ ಪೊಲೀಸರು ಭದ್ರತೆ ಮತ್ತು ಜಾಗರೂಕತೆಯ ಕಾರಣಗಳಿಂದ, ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಮಾಡುವ ಬದಲು, ಒಂದು ಅಥವಾ ಎರಡು ದಿನ ಮುಂದೂಡುವುದು ಉತ್ತಮ ಎಂದು ಹೇಳಿದ್ದಾರೆ. ಇದು ಭದ್ರತೆ ಮತ್ತು ಜಾಗರೂಕತೆಯ ಬಗ್ಗೆ. ಪೊಲೀಸರ ಸಲಹೆ ನೈಜವಾದ ಸಲಹೆ ಎಂದು ನಾವು ಭಾವಿಸಿದ್ದೇವೆ. ಈ ಪಾದಯಾತ್ರೆಯನ್ನು ಆಗಸ್ಟ್ ೧೬ ರಂದು ಪ್ರಾರಂಭಿಸಲಾಗುವುದು ಎಂದು ಮನೀಶ್ ಜಿ ಹೇಳಿದ್ದಾರೆ.