ಕಿಂಗ್ ಖಾನ್‌ಗೆ ಕ್ಯಾರಿಯರಾ ಪ್ರಶಸ್ತಿ
ಮುಂಬೈ ,ಅ.೧೩-ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
೭೭ನೇ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಶಾರುಖ್ ಖಾನ್ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದಾರೆ. ಅಲ್ಲಿ ಕಿಂಗ್ ಖಾನ್ ಪ್ರೇಕ್ಷಕರೊಂದಿಗೆ ತುಂಬಾ ಬೆರೆತು ಅವರು ತಮ್ಮ ಪ್ರಸಿದ್ಧ ಚಲನಚಿತ್ರವೊಂದರ ಹಾಡನ್ನು ಎಲ್ಲರೊಂದಿಗೆ ಹಾಡಿದರು. ಇದೀಗ ಶಾರುಖ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾರುಖ್ ಖಾನ್ ತಮ್ಮ ಕುಚ್ ಕುಚ್ ಹೋತಾ ಹೈ
ಚಿತ್ರದ ಶೀರ್ಷಿಕೆ ಗೀತೆ ಕುಚ್ ಕುಚ್ ಹೋತಾ ಹೈ ಹಾಡಿದ್ದಾರೆ.ಮೊದಲು ಅಲ್ಲಿದ್ದ ಇಡೀ ಪ್ರೇಕ್ಷಕರು ಕಿಂಗ್ ಖಾನ್ ಅವರ ಕುಚ್ ಕುಚ್ ಹೋತಾ ಹೈ ಚಿತ್ರದ ಶೀರ್ಷಿಕೆ ಗೀತೆಯನ್ನು ಹಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಸ್ವಲ್ಪ ಸಮಯದ ನಂತರ, ಶಾರುಖ್ ಸಹ ಅವರೊಂದಿಗೆ ಹಾಡನ್ನು ಹಾಡಲು ಪ್ರಾರಂಭಿಸಿದ್ದಾಗ ಆಗ ಅಲ್ಲಿನ ದೃಶ್ಯ ಸಂಗೀತ ಕಛೇರಿಯಂತೆ ಕಂಡು ಬಂದಿದೆ.
ಅಭಿಮಾನಿಗಳ ಮನ ಗೆದ್ದಿದ್ದ
ಬಾಲಿವುಡ್ ಕಿಂಗ್ ಖಾನ್ ಅವರಿಗೆ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪರ್ಡೋ ಅಲ್ಲಾ ಕ್ಯಾರಿಯರಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ೮,೦೦೦ ಕ್ಕೂ ಹೆಚ್ಚು ಅಭಿಮಾನಿಗಳೊಂದಿಗೆ ಕಾರ್ಯಕ್ರಮವನ್ನು ನಡೆಸಲಾಯಿತು, ಅಲ್ಲಿ ಶಾರುಖ್ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಶಾರುಖ್ ಮತ್ತು ಪ್ರೇಕ್ಷಕರ ನಡುವಿನ ಸಂಭಾಷಣೆಯ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ, ಅದರಲ್ಲಿ ಅವರು ಕುಚ್ ಕುಚ್ ಹೋತಾ ಹೈ ಹಾಡನ್ನು ಹಾಡಿದ್ದಾರೆ. ವೀಡಿಯೊದಲ್ಲಿ, ಪ್ರೇಕ್ಷಕರು ಅವರೊಂದಿಗೆ ಹಾಡನ್ನು ಹಾಡುವುದನ್ನು ಕಾಣಬಹುದು. ಪ್ರೇಕ್ಷಕರ ಪ್ರೀತಿಗೆ ಮರುಳಾದ ಶಾರುಖ್ ಕೂಡ ಅವರ ಜೊತೆ ಸೇರಿ ವಿಶೇಷ ಕ್ಷಣವನ್ನು ಸೃಷ್ಟಿಸಿದರು.