ಇಸ್ರೇಲ್ – ಇರಾನ್ ಕದನ ವಿರಾಮಕ್ಕೆ ಬೈಡೆನ್ ನಿರ್ಧಾರ ಅವಶ್ಯ
ಟೆಲ್ ಅವೀವಾ,ಆ.೧೩- ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಕದನ ವಿರಾಮ ಘೋಷಣೆ ಮಾಡುವ ಮಾತುಕತೆಗಳು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಯೋಜನೆ ಆಧರಿಸಿದೆ ಎಂದು ಹಮಾಸ್ ಹೇಳಿದೆ.
ಇಸ್ರೇಲ್ ಸೇನಾ ಪಡೆ ಗಾಜಾ ನಗರದ ಶಾಲೆಯೊಂದರ ಮೇಲೆ ಮಾರಣಾಂತಿಕ ವೈಮಾನಿಕ ದಾಳಿ ನಂತರ, ದಕ್ಷಿಣ ಗಾಜಾದ ಖಾನ್ ಯೂನಿಸ್ ನಲ್ಲಿರುವ ಸಾವಿರಾರು ಸ್ಥಳೀಯರನ್ನು ಸ್ಥಳಾಂತರ ಮಾಡುವಂತೆ ಆದೇಶಿಸಿದ ಬೆನ್ನಲ್ಲೇ ಹಮಾಸ್ ಈ ಹೇಳಿಕೆ ನೀಡಿದೆ
ಗಾಜಾದಲ್ಲಿನ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕದನ ವಿರಾಮದ ಯಾವುದೇ ಪುನರಾರಂಭದ ಮಾತುಕತೆಗಳು ಅಥವಾ ಹೊಸ ಸುತ್ತಿನ ಮಾತುಕತೆಗಳು ಅಮೇರಿಕಾ ಅಧ್ಯಕ್ಷರ ನಡೆ ಅನುಸರಿಸಿವೆ ಎಂದು ಹಮಾಸ್ ನಾಯಕರು ಹೇಳಿದ್ದಾರೆ
ಕಳೆದ ವಾರ, ಕತಾರ್, ಈಜಿಪ್ಟ್ ಮತ್ತು ಅಮೆರಿಕಾದ ಅಂತರರಾಷ್ಟ್ರೀಯ ಮಧ್ಯವರ್ತಿಗಳು ಇಸ್ರೇಲ್ ಮತ್ತು ಹಮಾಸ್ ಅನ್ನು ಆಗಸ್ಟ್ ೧೫ ರಂದು ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದದ ಮಾತುಕತೆಗೆ ಹಾಜರಾಗುವಂತೆ ಒತ್ತಾಯಿಸಿರುವ ನಡುವೆ ಈ ಹೇಳಿಕೆ ಹೊರಬಿದ್ದಿದೆ.
ಮೇ ತಿಂಗಳಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರು ಮಂಡಿಸಿದ ಚೌಕಟ್ಟಿಗೆ ಹೊಸ ನಿಯಮಗಳನ್ನು ಪರಿಚಯಿಸಿದ ನಂತರ ಮಾತುಕತೆಗಳು ಕಳೆದ ತಿಂಗಳು ಕುಂಠಿತಗೊಂಡಿದ್ದು ಇರಾನ್, ಇಸ್ರೇಲ್ ನಡುವೆ ಯುದ್ದ ನಡೆಯುತ್ತಿದೆ. ಇಸ್ರೇಲ್ ಪರ ಅಮೇರಿಕಾ ನಿಂತಿದೆ.
ಮತ್ತೊಂದೆಡೆ ಇರಾನ್ ಪರ ಹಮಾಸ್ ಬಂಡುಕೋರರು ನಿಂತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಇದರಿಂದ ಸ್ವಾಂತ್ರತ್ರೋತ್ಸದ ಹಿನ್ನೆಲೆಯಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು ಎನ್ನುವುದು ಹಮಾಸ್ ನಾಯಕರ ಆಗ್ರಹವಾಗಿದೆ.
ಕಳೆದ ವಾರ ಜಂಟಿ ಹೇಳಿಕೆಯಲ್ಲಿ, ಉಭಯ ದೇಶದ ಮಧ್ಯವರ್ತಿಗಳು ಆಗಸ್ಟ್ ೧೫ ರಂದು ದೋಹಾ ಅಥವಾ ಕೈರೋದಲ್ಲಿ ಮಾತುಕತೆ ನಡೆಸಬಹುದು ಎಂದು ಹೇಳಲಾಗಿದೆ.