೨೦೩೬ಕ್ಕೆ ದೇಶದ ಜನಸಂಖ್ಯೆ ೧೫೨ ಕೋಟಿ ತಲುಪುವ ನಿರೀಕ್ಷೆ
ನವದೆಹಲಿ,ಆ.೧೩- ದೇಶದಲ್ಲಿ ೨೦೩೬ರ ವೇಳೆಗೆ ಜನಸಂಖ್ಯೆ ೧೫೨.೨ ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.
ವರದಿಯ ಪ್ರಕಾರ ’ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳ ಪ್ರಮಾಣ ೨೦೧೧ ಕ್ಕೆ ಹೋಲಿಸಿದರೆ ೨೦೩೬ ರಲ್ಲಿ ಕಡಿಮೆ ಆಗಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ೬೦ ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನಸಂಖ್ಯೆಯ ಪ್ರಮಾಣ ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
೨೦೩೬ ರಲ್ಲಿ ಭಾರತದ ಜನಸಂಖ್ಯೆ ೨೦೧೧ಕ್ಕೆ ಹೋಲಿಸಿದರೆ ಮಹಿಳೆಯ ಸಂಖ್ಯೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಲಿಂಗ ಅನುಪಾತದಲ್ಲಿ ಗಣನೀಯ ಸಾಧನೆ ಇದಾಗಲಿದೆ. ೨೦೧೧ ರಲ್ಲಿ ಪ್ರತಿ ೧,೦೦೦ ಪುರುಷರಿಗೆ ೯೪೩ ಮಂದಿ ಮಹಿಳೆ ಇದ್ದರೆ ೨೦೩೬ರಲ್ಲಿ ಈ ಪ್ರಮಾಣ ೯೫೨ ಕ್ಕೆ ಹೆಚ್ಚಾಗಲಿದೆ ಎನ್ನಲಾಗಿದೆ
ಈ ಬೆಳವಣಿಗೆ ಲಿಂಗ ಸಮಾನತೆಯ ಸಕಾರಾತ್ಮಕ ಪ್ರವೃತ್ತಿ ಎತ್ತಿ ತೋರಿಸುತ್ತದೆ.ವರದಿಯಲ್ಲಿ ಭಾರತದಲ್ಲಿನ ಮಹಿಳೆಯರು ಮತ್ತು ಪುರುಷರ ಪರಿಸ್ಥಿತಿಯ ಸಮಗ್ರ ಒಳನೋಟ ಹೊಂದಿದೆ. ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಆರ್ಥಿಕ ಭಾಗವಹಿಸುವಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಮಗ್ರ ಮಾಹಿತಿ ಒದಗಿಸಲಿದೆ ಎಂದು ಹೇಳಲಾಗಿದೆ.
ನಗರ-ಗ್ರಾಮೀಣ ವಿಭಾಗಗಳು ಮತ್ತು ಪ್ರದೇಶಗಳಾದ್ಯಂತ ಲಿಂಗ ವಿಂಗಡಣೆಯ ಡೇಟಾ ಪ್ರಸ್ತುತಪಡಿಸುತ್ತದೆ, ಜೊತೆಗೆ ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ. ಪ್ರಮುಖ ಸೂಚಕಗಳನ್ನು ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಪ್ರಕಟಿತ ಡೇಟಾದಿಂದ ಪಡೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ
“ಲಿಂಗ ಸಮಾನತೆ ಉತ್ತೇಜಿಸುವಲ್ಲಿ ಮತ್ತು ಅಳೆಯುವಲ್ಲಿ ಲಿಂಗ ಅಂಕಿಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಪ್ರಗತಿಗೆ ಮಾನದಂಡ ಒದಗಿಸುತ್ತವೆ, ಪುರುಷರು ಮತ್ತು ಮಹಿಳೆಯರ ನಡುವೆ ಗೋಚರ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಮಾಡುತ್ತವೆ” ಎಂದು ಅದು ಹೇಳಿದೆ.
೨೦೧೬ ರಿಂದ ೨೦೨೦ ರವರೆಗೆ, ೨೦ ರಿಂದ ೨೪ ಮತ್ತು ೨೫ ರಿಂದ ೨೯ ರ ವಯೋಮಾನದ ವಯಸ್ಸಿನ ನಿರ್ದಿಷ್ಟ ಫಲವತ್ತತೆ ದರ ಕ್ರಮವಾಗಿ ೧೩೫.೪ ಮತ್ತು ೧೬೬.೦ ರಿಂದ ೧೧೩.೬ ಮತ್ತು ೧೩೯.೬ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.