ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ
ಅಫಜಲಪುರ: ಆ.೧೩:ಪಟ್ಟಣದ ತಹಸೀಲ್ ಇಲಾಖೆಯಲ್ಲಿ ಸೋಮವಾರ ಗ್ರಾಮಲೆಕ್ಕಿಗ ಸಿದ್ದರಾಮ ಪಡಶೆಟ್ಟಿ ಜಮೀನಿನ ಜೆ.ಫಾರಂ ಪರಿಶೀಲಿಸಿ ಪಹಣಿ ಮಾಡಲು ಸೈಫನಸಾಬ ನಾಕೇದಾರನಿಂದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.ಲೋಕಾಯುಕ್ತ ಪೊಲೀಸ ಅಧೀಕ್ಷಕರಾದ ಎಸ್.ಪಿ.ಜಾನ ಆಂಟೋನಿ ಮಾರ್ಗದರ್ಶನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರ ತಂಡ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸೋಮವಾರ ದೂರುದಾರರು ದುದ್ದುಣಗಿ ಗ್ರಾಮದ ರಮೇಶ ಜೇವರ್ಗಿ ಅವರಿಂದ ೧.೩೩ ಎಕರೆ ಜಮೀನು ಪಡೆದಿದ್ದರು. ಭೂಮಿ ಕೇಂದ್ರದಿಂದ ಜಮೀನಿನ ಜೆ. ಫಾರಂ ಪರಿಶೀಲಿಸಿ ಪಹಣಿ ಮಾಡಲು ೭ ಸಾವಿರ ರೂಪಾಯಿ ಹಣದ ಬೇಡಿಕೆಯಿಟ್ಟಿದ್ದರು.
ಗ್ರಾಮಲೆಕ್ಕಿಗ ಸಿದ್ದರಾಮ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಧೃವತರ ತಿಳಿಸಿದರು. ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ ಗಂಗಲ್, ಸಿಬ್ಬಂದಿಗಳಾದ ಶರಣು, ಮಸೂದ, ಹಣಮಂತಪ್ಪಾ, ರಾಜೀವ ಎಸ್ ಐ, ಕಣಯ್ಯ ಲಾಲ, ಮಂಜುನಾಥ ಇದ್ದರು.