ಐಶ್ವರ್ಯಾ ರೈ ಜೊತೆ ವಿಚ್ಛೇದನ: ಸತ್ಯ ಬಿಚ್ಚಿಟ್ಟ ಅಭಿಷೇಕ್
ಮುಂಬೈ,ಅ.೧೨-ಬಾಲಿವುಡ್ ತಾರಾ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ತುಂಬಾ ದಿನಗಳಿಂದ ಒಬ್ಬರಿಗೊಬ್ಬರು ದೂರವೇ ಉಳಿದಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಆಗಿದ್ದಾರೆ, ಇಬ್ಬರೂ ಒಟ್ಟಿಗೆ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗಿಲ್ಲ ಮತ್ತು ಅವರು ಹಲವಾರು ದಿನಗಳಿಂದ ಬೇರ್ಪಟ್ಟಿದ್ದಾರೆ ಎಂದು ವದಂತಿಗಳಿವೆ. ಆದರೆ, ಈ ವದಂತಿಗಳ ಬಗ್ಗೆ ಐಶ್ವರ್ಯಾ ಮತ್ತು ಅಭಿಷೇಕ್ ಇಬ್ಬರೂ ಮೌನವಾಗಿದ್ದಾರೆ. ಇದೇ ಸಮಯದಲ್ಲಿ ಕೆಲವು ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ನಾವು ವಿಚ್ಛೇದನ ಪಡೆದಿದ್ದೇವೆ ಎಂದು ಹೇಳುವ ನಕಲಿ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಹಲವರು ವಿಚ್ಛೇದನ ನಿಜವೇ ಎಂದು ನಂಬಿದ್ದಾರೆ.
ಇದೀಗ ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ತನ್ನ ನಿಶ್ಚಿತಾರ್ಥದ ಉಂಗುರವನ್ನು ಎಲ್ಲರಿಗೂ ತೋರಿಸಿ ಈ ಮೂಲಕ ತಾನು ಮತ್ತು ಪತ್ನಿ ವಿಚ್ಛೇದನ ಪಡೆದಿಲ್ಲ ಎಂದು ಖಚಿತಪಡಿಸಿದ್ದಾರೆ. ಸಂದರ್ಶನ ಒಂದರಲ್ಲಿ, ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರೊಂದಿಗಿನ ವಿಚ್ಛೇದನದ ಬಗ್ಗೆ ಕೇಳಲಾಯಿತು. ಅದರ ಬಗ್ಗೆ ನಾನು ನಿಮಗೆ ಏನೂ ಹೇಳಲು ಇಲ್ಲ, ದುರದೃಷ್ಟವಶಾತ್ ನೀವೆಲ್ಲರೂ ಸುಳ್ಳು ಸಂದೇಶವನ್ನು ಹರಡುತ್ತಿದ್ದೀರಿ, ನೀವು ಅದನ್ನು ಏಕೆ ಮಾಡುತ್ತಿದ್ದೀರಿ ಎಂದು ನನಗೆ ಅರ್ಥವಾಗಿದೆ. ನಿಮಗೆ ಒಳ್ಳೆಯ ಕಥೆಗಳು ಬೇಕು. ನೀವು ನಮ್ಮನ್ನು ಬಳಸುತ್ತಿದ್ದೀರಿ ಏಕೆಂದರೆ ನಾವು ಸೆಲೆಬ್ರಿಟಿಗಳು, ನಾವು ವಿಚ್ಛೇದನ ಪಡೆದಿಲ್ಲ.ನನ್ನನ್ನು ಕ್ಷಮಿಸಿ ಮದುವೆಯಾಗಿದ್ದೇನೆ ಎಂದು ತನ್ನ ಉಂಗುರವನ್ನು ತೋರಿಸಿದ್ದಾನೆ. ಈ ಮೂಲಕ ಮತ್ತೊಮ್ಮೆ ತಮ್ಮ ವಿರುದ್ಧ ಬರುತ್ತಿದ್ದ ವದಂತಿಗಳಿಗೆ ಕಡಿವಾಣ ಹಾಕಿದ್ದಾರೆ.
ವಿಚ್ಛೇದನದ ಬಗ್ಗೆ ಹಲವಾರು ವರದಿಗಳ ನಂತರ ಅವರು ಈ ಸುದ್ದಿಯನ್ನು ನಿರಾಕರಿಸಿದ್ದು ಇದೇ ಮೊದಲು.
ಅಭಿಷೇಕ್ ಮತ್ತು ಐಶ್ವರ್ಯಾ ೨೦೦೭ ರಲ್ಲಿ ವಿವಾಹವಾದರು. ಅವರ ಮಗಳು ಆರಾಧ್ಯ ೨೦೧೧ ರಲ್ಲಿ ಜನಿಸಿದ್ದಾಳೆ. ಇವರಿಬ್ಬರೂ ಧೈ ಅಕ್ಷರ್ ಪ್ರೇಮ್ ಕೆ, ಕುಚ್ ನಾ ಕಹೋ, ಗುರು, ಧೂಮ್-೨, ರಾವಣ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
ವೈರಲ್ ಆದ ನಕಲಿ ವಿಡಿಯೋ
ಅಭಿಷೇಕ್ ಬಚ್ಚನ್ ಸ್ಪಷ್ಟನೆ ನಂತರ ಇತ್ತೇಚಿಗೆ ಅಂತರ್ಜಾಲದಲ್ಲಿ ಪ್ರಕಟವಾಗಿರುವ ವಿಡಿಯೋ ನಿಜವಾದದ್ದೋ ಅಥವಾ ನಕಲಿ ವಿಡಿಯೋವೋ ಎಂಬ ಗೊಂದಲದಲ್ಲಿ ಹಲವರು ಇದ್ದಾರೆ. ವೈರಲ್ ಆಗಿರುವ ಈ ನಕಲಿ ವಿಡಿಯೋದಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಅವರ ಮಗಳು ಆರಾಧ್ಯ ಬಚ್ಚನ್ ಹೆಸರನ್ನೂ ಉಲ್ಲೇಖಿಸಲಾಗಿದೆ. ನಾವು ಕಳೆದ ಜುಲೈನಿಂದ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಇಂತಹ ನಕಲಿ ವಿಡಿಯೊ ಸಿದ್ಧಪಡಿಸಿದವರು ಯಾರು ಎಂಬುದು ತಿಳಿದು ಬಂದಿಲ್ಲ.