ತಪ್ಪಾಗಿ ಹಣ ಕಳುಹಿಸಿದರೆ ಹಿಂಪಡೆಯಲು ಕ್ರಮ
ನವದೆಹಲಿ.ಆ.೧೨-ಡಿಜಿಟಲ್ ಪೇಮೆಂಟ್ ಹಣ ಪಾವತಿ ಈಗ ಅತಿ ಹೆಚ್ಚು ಬಳಕೆಯಲ್ಲಿದೆ. ಅದರಲ್ಲೂ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿ ಮೂಲಕ ಯುಪಿಐನಲ್ಲಿ ಹಣ ಪಾವತಿಸುವುದು ಸರ್ವೇ ಸಾಮಾನ್ಯದ ಸಂಗತಿ. ಇಂಥ ವಹಿವಾಟು ವೇಳೆ ತಪ್ಪಾಗಿ ಹಣ ಕಳುಹಿಸಿದ ಸಂದರ್ಭ ಬರಬಹುದು. ಯಾರಿಗೋ ಹಣ ಕಳುಹಿಸಲು ಹೋಗಿ ಇನ್ಯಾರಿಗೋ ಕಳುಹಿಸಿ ದೊಡ್ಡ ಪ್ರಮಾದಗಾಳಗಿವೆ. ಇಂಥ ಸಂದರ್ಭದಲ್ಲಿ ಆ ವ್ಯಕ್ತಿಗೆ ನೀವು ಹಣ ಮರಳಿಸಲು ಮೆಸೇಜ್ ಮೂಲಕವೇ ಮರಳಿಪಡೆಯಬಹುದು. ಅದಕ್ಕೆ ಸ್ಪಂದನೆ ಸಿಗದಿದ್ದರೆ ನಿಮಗೆ ಇನ್ನೂ ಒಂದು ದಾರಿ ಇರುತ್ತದೆ. ಅದುವೇ ಎನ್‌ಪಿಸಿಐನಲ್ಲಿ ದೂರು ದಾಖಲಿಸಬಹುದು.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್‌ನಲ್ಲಿ ದೂರು ದಾಖಲಿಸುವ ಕ್ರಮ
ನೀವು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಇತ್ಯಾದಿ ಯಾವುದೇ ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ ತಪ್ಪಾಗಿ ಹಣ ಪಾವತಿಸಿದ್ದರೆ, ಈ ಯುಪಿಐ ಅನ್ನು ಅಭಿವೃದ್ದಿಪಡಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್‌ಪಿಸಿಐ) ಸಂಸ್ಥೆ ಬಳಿ ದೂರು ದಾಖಲಿಸಬಹುದು. ಈ ಮೂಲಕ ನಿಮ್ಮ ಹಣ ಮರಳಿ ಪಡೆಯುವ ಅವಕಾಶ ಇರುತ್ತದೆ.
ಎನ್‌ಪಿಸಿಐನವೆಬ್ಸೈಟ್ ವಿಳಾಸ: ತಿತಿತಿ.ಟಿಠಿಛಿi.oಡಿg.iಟಿ/ಇಲ್ಲಿಗೆ ಭೇಟಿ ನೀಡಿ.ಈ ವೆಬ್‌ಸೈಟ್‌ನಲ್ಲಿ ಮುಖ್ಯ ಮೆನುಗಳ ಪೈಕಿ ಕೊನೆಯಲ್ಲಿರುವ ‘ಗೆಟ್‌ಇನ್ ಟಚ್ ಅಡಿಯಲ್ಲಿ ‘ಯುಪಿಐ ಕಂಪ್ಲೇಂಟ್ ಅನ್ನು ಕ್ಲಿಕ್ ಮಾಡಿಯುಪಿಐ ಡಿಸ್ಪೂಟ್ ರೀಡ್ರೆಸಲ್ ಮೆಕ್ಯಾನಿಸಂ ಪುಟ ತೆರೆಯುತ್ತದೆ. ಈಪುಟಕ್ಕೆ ನೇರವಾಗಿ ಹೋಗುವ ಲಿಂಕ್ ಇಲ್ಲಿದೆ: www.npci.org.in/what-we-do/upi/dispute-redressal-mechanism ಇಲ್ಲಿ ಪುಟದ ಮಧ್ಯಭಾಗದಲ್ಲಿ ಕಂಪ್ಲೇಂಟ್ ಸೆಕ್ಷನ್ ಕಾಣಬಹುದು. ಇಲ್ಲಿ ವಿವಿಧ ರೀತಿಯ ದೂರುಗಳಿಗೆ ಆಯ್ಕೆಗಳಿವೆ. ಈ ಪೈಕಿ ನಿಮ್ಮ ಯುಪಿಐ ಹಣ ಹಿಂಪಡೆಯಲು ‘ಟ್ರಾನ್ಸಾಕ್ಷನ್ ಮುಂದಿರುವ ಪ್ಲಸ್ ಮಾರ್ಕ್ ಅನ್ನು ಕ್ಲಿಕ್ ಮಾಡಿ.ಇದರಲ್ಲಿ ನೇಚರ್ ಆಫ್ ಟ್ರಾನ್ಸಾಕ್ಷನ್ ಯಾವುದೆಂದು ಆಯ್ಕೆ i ಮುಂದಿನ ಟ್ಯಾಬ್ನಲ್ಲಿ ಸಮಸ್ಯೆ ಯಾವುದೆಂದು ಆಯ್ಕೆ ಮಾಡಿ. ತಪ್ಪಾಗಿ ಒಂದು ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಆಯ್ಕೆ ಮಾಡಿ.ಬಳಿಕ ಕಮೆಂಟ್ ಬರೆಯುವುದಿದ್ದರೆ ಬರೆಯಬಹುದು.ಟ್ರಾನ್ಸಾಕ್ಷನ್ ರೆಫರೆನ್ಸ್ ನಂಬರ್ ಹಾಕಿರಿಹಣ ಕಳುಹಿಸಲಾದ ನಿಮ್ಮ ಬ್ಯಾಂಕ್ ಹೆಸರು ಆಯ್ಕೆ ಮಾಡಿಯುಪಿಐ ಐಡಿ ನಮೂದಿಸಿಎಷ್ಟು ಹಣ ಕಳುಹಿಸಿದ್ದೀರಿ ಎಂದು ನಿಖರವಾಗಿ ನಮೂದಿಸಿಹಣ ಕಳುಹಿಸಲಾದ ದಿನಾಂಕ ಆಯ್ಕೆ ಮಾಡಿನಿಮ್ಮ ಇಮೇಲ್ ಐಡಿ ಮತ್ತು ನೊಂದಾಯಿತ ಮೊಬೈಲ್ ನಂಬರ್ ನಮೂದಿಸಿ.ಇದಾದ ಬಳಿಕ ಹಣ ಕಡಿತಗೊಂಡಿದ್ದಕ್ಕೆ ಸಾಕ್ಷಿಯಾಗಿ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಅಪ್ಲೋಡ್ ಮಾಡಿರಿ.ಇದಾದ ಬಳಿಕ ಅಂತಿಮವಾಗಿ ‘ಸಬ್ಮಿಟ್ ಕ್ಲಿಕ್ ಮಾಡಿ.