ಪಾತ್ರೆಯಂತೆ ಪಿಸ್ತೂಲು ಸ್ವಚ್ಛತೆ ವಿಡಿಯೋ ವೈರಲ್
ಮೊರೆನಾ,ಆ.೧೨- ಮಧ್ಯಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಸ್ವದೇಶಿ ನಿರ್ಮಿತ ಪಿಸ್ತೂಲನ್ನು ಪಾತ್ರೆಯಂತೆ ಸ್ವಚ್ಛಗೊಳಿಸುತ್ತಿದ್ದಾಳೆ. ಮಹಿಳೆಯ ಒಂದು ಕೈಯಲ್ಲಿ ಪಿಸ್ತೂಲ್ ಮತ್ತು ಇನ್ನೊಂದು ಕೈಯಲ್ಲಿ ಬ್ರಷ್ ಹಿಡಿದು ಪಾತ್ರೆಯಲ್ಲಿರುವ ಸರ್ಫ್ ನೀರಿನಿಂದ ಮಹಿಳೆ ಪಿಸ್ತೂಲ್ ತಿಕ್ಕಿ ತೊಳೆಯುತ್ತಿರುವ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ವಿಡಿಯೋ ಮಧ್ಯಪ್ರದೇಶದ ಮೊರೆನಾದಿಂದ ಬಂದಿದೆ.
ವೀಡಿಯೋ ಆಧಾರದ ಮೇಲೆ ಪೊಲೀಸರು ಸ್ವದೇಶಿ ಪಿಸ್ತೂಲ್ ತಯಾರಿಸುತ್ತಿದ್ದ ಅಕ್ರಮ ಕಾರ್ಖಾನೆ ಮೇಲೆ ದಾಳಿ ನಡೆಸಿ ಪೊಲೀಸರು ತಂದೆ ಮತ್ತು ಮಗನನ್ನು ಬಂಧಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .ವೀಡಿಯೊದಲ್ಲಿ, ಮಹಿಳೆ ಬ್ರಷ್‌ನಿಂದ ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ತಂದೆ-ಮಗನನ್ನು ಬಂಧಿಸಿ ಆಯುಧ ತಯಾರಿಸುವ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಮೊರೆನಾ ಜಿಲ್ಲೆಯ ಪೋರ್ಸಾ ತಹಸಿಲ್ ಪ್ರದೇಶದ ಗಣೇಶಪುರ ಗ್ರಾಮದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ನಡೆಯುತ್ತಿದೆ. ಈ ಕಾರ್ಖಾನೆಯನ್ನು ಒಂದೇ ಕುಟುಂಬದ ಸದಸ್ಯರು ಒಟ್ಟಾಗಿ ನಡೆಸುತ್ತಿದ್ದರು.
ಈ ವಿಡಿಯೋ ಮೂಲಕವೂ ಈ ಅಕ್ರಮ ಕಾರ್ಖಾನೆ ಬಯಲಾಗಿದೆ. ಪಿಸ್ತೂಲ್ ತೊಳೆಯುತ್ತಿರುವ ಮಹಿಳೆ ಬೇರೆ ಯಾರೂ ಅಲ್ಲ, ಈ ಕಾರ್ಖಾನೆಯನ್ನು ನಡೆಸುತ್ತಿರುವ ಶಕ್ತಿ ಕಪೂರ್ ಅವರ ಪತ್ನಿ ಎಂದು ಹೇಳಲಾಗುತ್ತಿದೆ.
ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಅಕ್ರಮ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ, ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ನಿರ್ಮಾಣ ಸಾಮಗ್ರಿಗಳೊಂದಿಗೆ ಪರಾರಿಯಾಗಲು ಯತ್ನಿಸಿದ ಶಕ್ತಿ ಕಪೂರ್ ಮತ್ತು ಅವರ ತಂದೆ ಬಿಹಾರಿಲಾಲ್ ಅವರನ್ನು ಪೊಲೀಸರು
ಬಂಧಿಸಿದ್ದಾರೆ. ಪೊಲೀಸರು ಸ್ಥಳದಿಂದ ಒಂದು ೩೧೫ ಬೋರ್ ಅಧಿಯಾ, ಒಂದು ೩೧೫ ಬೋರ್ ಪಿಸ್ತೂಲ್, ಒಂದು ೩೨ ಬೋರ್ ಪಿಸ್ತೂಲ್ ಮತ್ತು ನಿರ್ಮಾಣಕ್ಕೆ ಬಳಸಿದ ವಸ್ತುಗಳು ಮತ್ತು ಉಪಕರಣಗಳು ಸೇರಿದಂತೆ ಹಲವಾರು ಅರೆ-ಸಿದ್ಧ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.