ಸಚಿವೆ ಸುರೇಖಾ ರಾಜೀನಾಮೆಗೆ ಟಾಲಿವುಡ್ ಆಗ್ರಹ
ಹೈದರಾಬಾದ್,ಅ.೩- ಸಚಿವೆ ಕೊಂಡ ಸುರೇಖಾ ಅವರ ಹೇಳಿಕೆಗೆ ಟಾಲಿವುಡ್ ಹೊತ್ತಿ ಉರಿಯುತ್ತಿದೆ. ಕೊಂಡ ಸುರೇಖಾ ಅವರು ಅಕ್ಕಿನೇನಿ ಕುಟುಂಬ ಮತ್ತು ಸಮಂತಾ ಅವರ ಮೇಲೆ ಮಾಡಿರುವ ಅನುಚಿತ ಕಾಮೆಂಟ್‌ಗಳು ಮತ್ತು ಆಧಾರರಹಿತ ಆರೋಪಗಳನ್ನು ಒಕ್ಕೋರಲಿನಿಂದ ಖಂಡಿಸಲಾಗಿದೆ.
ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಜ್ಯೂನಿಯರ್ ಎನ್ಟಿಆರ್, ನಾನಿ, ಅಲ್ಲು ಅರ್ಜುನ್ , ಅಮಲಾ, ಅಖಿಲ್, ಸಮಂತಾ, ನಾಗ ಚೈತನ್ಯ, ರೋಜಾ,ಖುಷ್ಬೂ, ಸುಧೀರ್ ಬಾಬು, ಸುಶಾಂತ್ ಮತ್ತು ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ಎಲ್ಲರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ
ಅತ್ಯಂತ ಹೇಯ ಮತ್ತು ಆಕ್ಷೇಪಾರ್ಹ ಅವಮಾನಕರ ಎಂದಿದೆ. ಮೆಗಾಸ್ಟಾರ್ ಚಿರಂಜೀವಿ ಕೂಡ ಸುರೇಖಾ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌರವಾನ್ವಿತ ಮಹಿಳಾ ಸಚಿವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಅವಹೇಳನಕಾರಿ ಹೇಳಿಕೆಗಳಿಂದ ನನಗೆ ತುಂಬಾ ನೋವಾಗಿದೆ ಎಂದು ಚಿರಂಜೀವಿ ಹೇಳಿದ್ದಾರೆ.
ಮಹಿಳೆಯರನ್ನು ರಾಜಕೀಯಕ್ಕೆ ಎಳೆದು ತರುವುದು ತಪ್ಪು ಎಂದು ಚಿರಂಜೀವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ನಾಯಕರು ತಮ್ಮ ರಾಜಕೀಯಕ್ಕಾಗಿ ಅಸಹ್ಯಕರ ರೀತಿಯಲ್ಲಿ ಸುಳ್ಳು ಆರೋಪ ಮಾಡುವುದು ಒಳ್ಳೆಯದಲ್ಲ ಎಂದು ಚಿರಂಜೀವಿ ಹೇಳಿದ್ದಾರೆ. ರಾಜಕೀಯಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು ಎಂದು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮೇಲಾಗಿ, ರಾಜಕಾರಣಿಗಳು ಗೌರವಾನ್ವಿತ ಸ್ಥಾನದಲ್ಲಿರುವವರು ಜನರಿಗೆ ಉದಾಹರಣೆ ಎಂದು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಚಿರಂಜೀವಿ ಸಲಹೆ ನೀಡಿದರು.
ಯಾರನ್ನೋ ಅವಮಾನಿಸುವ ಹಾಗೆ ಮಾತನಾಡುವುದು ನಮ್ಮ ಸಂಪ್ರದಾಯವಲ್ಲ. ಈ ರೀತಿ ಮಾತನಾಡುವವರನ್ನು ಲಘುವಾಗಿ ಪರಿಗಣಿಸಬಾರದು.. ಪ್ರತಿಯೊಬ್ಬರೂ ವೈಯಕ್ತಿಕ ಖಾಸಗಿತನವನ್ನು ಗೌರವಿಸಬೇಕು.. ಮಹಿಳೆಯರು ತಮ್ಮ ವೈಯಕ್ತಿಕ ವಿಷಯಗಳನ್ನು ರಕ್ಷಿಸಿಕೊಳ್ಳಬೇಕು, ಸಮಾಜದಲ್ಲಿ ತಮ್ಮ ಜವಾಬ್ದಾರಿ ಮತ್ತು ಗೌರವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.