ಮೋದಿ ಚಿಂತನೆ,ಸಮಾನತೆಗೆ ಹಾನಿ
ಮುಂಬೈ,ಅ.೧– ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜಕ್ಕೆ ಅಪಾಯಕಾರಿ ಮತ್ತು ಅವರ ಮನಸ್ಸಿನಲ್ಲಿರುವ ಚಿಂತನೆ “ಸಮಾನತೆಗೆ ಹಾನಿಕಾರಕ” ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಾಗ್ದಾಳಿ ನಡೆಸಿದ್ದಾರೆ
ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ, ಬಿಜೆಪಿಯ ನಾಯಕರು ತಮ್ಮ ಪಕ್ಷವು ೪೦೦ ಸ್ಥಾನಗಳನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಹೇಳಿದ್ದರು ಅದಕ್ಕೆ ದೇಶದ ಜನರು ಪಾಠ ಕಲಿಸಿದ್ದಾರೆ ಎಂದಿದ್ದಾರೆ
ಮುಂಬೈನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕೋರೆಗಾಂವ್ ಭೀಮಾ ಪ್ರಕರಣದ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ’ಕೋಮುವಾದಿಗಳು ಇತಿಹಾಸವನ್ನು ಅಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋರೆಗಾಂವ್ ಭೀಮಾ ಇತಿಹಾಸ ಅಳಿಸಲು ಕೆಲವು ಕೋಮುವಾದಿಗಳು ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಕೋರೆಗಾಂವ್ ಭೀಮಾ – ಜನರು ಮಾಡಿದ ತ್ಯಾಗ, ಆದರೆ ಕೆಲವು ಕೋಮುವಾದಿಗಳು ಅದನ್ನು ಅಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ
೧೮೧೮ರ ಕೋರೆಗಾಂವ್ ಭೀಮಾ ಯುದ್ಧದ ಸ್ಮರಣಾರ್ಥ ಪುಣೆಯಲ್ಲಿ ೨೦೧೭ರ ಡಿಸೆಂಬರ್ ೩೧ ರಂದು ಆಯೋಜಿಸಲಾದ ಎಲ್ಗರ್ ಪರಿಷತ್ ಸಮಾವೇಶದ ಒಂದು ದಿನದ ನಂತರ ಹಿಂಸಾಚಾರ ಭುಗಿಲೆದ್ದ ನಂತರ ಎಲ್ಗರ್ ಪರಿಷತ್ತಿನ ಹಲವಾರು ಸದಸ್ಯರು ಮತ್ತು ಇತರ ದಲಿತ ಕಾರ್ಯಕರ್ತರನ್ನು ಬಂಧಿಸಿದ್ದ ಕ್ರಮದ ಬಗ್ಗೆ ಈ ಹೇಳಿಕೆ ನೀಡಿದ್ದಾರೆ
ಹಿಂಸಾಚಾರದ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ೨೦೧೮ರ ಫೆಬ್ರವರಿರಲ್ಲಿ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎನ್ ಪಟೇಲ್ ನೇತೃತ್ವದಲ್ಲಿ ಕೋರೆಗಾಂವ್ ಭೀಮಾ ವಿಚಾರಣಾ ಆಯೋಗ ರಚಿಸಿತ್ತು. ಹಿಂಸಾಚಾರ ರಾಜ್ಯ ಮತ್ತು ದೇಶದಲ್ಲಿ ಅಶಾಂತಿ ಉಂಟುಮಾಡಿದೆ ಎಂದು ಹೇಳಿದ್ದಾರೆ
”ಒಂದು ದಿನ ಆಯೋಗದ ಮುಂದೆ ಹಾಜರಾಗುವಂತೆ ಸಮನ್ಸ್ ಬಂದಿತ್ತು. ಕೋರೆಗಾಂವ್ ಭೀಮಾ ಇತಿಹಾಸ ತಮ್ಮ ಪ್ರಾಣ ತ್ಯಾಗ ಮಾಡಿದ ಜನರ ಇತಿಹಾಸವಾಗಿದೆ. ಆದರೆ ಕೆಲವು ಕೋಮುವಾದಿಗಳು ಆ ಇತಿಹಾಸವನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದ್ದಾರೆ,” ಎಂದು ಅವರು ಆರೋಪಿಸಿದ್ದಾರೆ