ಬಾಲ್ಯದ ಚಿತ್ರ ಹಂಚಿಕೊಂಡ ಪ್ರಿಯಾಂಕ
ಮುಂಬೈ,ಅ.೧-ಪ್ರಿಯಾಂಕಾ ಜೋನಾಸ್ ಚೋಪ್ರಾ ಭಾರತೀಯ ನಟಿ, ರೂಪದರ್ಶಿ, ಚಲನಚಿತ್ರ ನಿರ್ಮಾಪಕಿ ಮತ್ತು ಗಾಯಕಿ. ಪ್ರಿಯಾಂಕಾ ೨೦೦೦ನೇ ಸಾಲಿನ ವಿಶ್ವ ಸುಂದರಿ ವಿಜೇತೆ. ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ.
ಆದರೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಯಾವುದೇ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ ಅವರು ತಮ್ಮ ಬಾಲಿವುಡ್ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರಿಯಾಂಕಾ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಚಿತ್ರಗಳು ಮತ್ತು ವೀಡಿಯೊಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಇತ್ತೀಚೆಗೆ ಪೋಸ್ಟ್ ಒಂದು ಮಾಡಿದ್ದಾರೆ ಅದರಲ್ಲಿ ಅವರು ತಮ್ಮ ರೂಪಾಂತರದ ಫೋಟೋ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, ಪ್ರಿಯಾಂಕಾ ಚೋಪ್ರಾ ತನ್ನ ಬಾಲ್ಯದ ಫೋಟೋ ಮತ್ತು ತನ್ನ ಹದಿಹರೆಯದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರ ಈ ಪೋಸ್ಟ್‌ನಲ್ಲಿ, ಒಂದು ಕಡೆ, ಹುಡುಗನ ಕಟ್‌ನಲ್ಲಿ ಪುಟ್ಟ ಹುಡುಗಿ ಕಾಣಿಸಿಕೊಂಡಿದ್ದಾಳೆ, ಯಾರಾದರೂ ಹುಡುಗ ಎಂದು ತಪ್ಪಾಗಿ ತಿಳಿಯಬಹುದು. ಇನ್ನೊಂದು ಬದಿಯಲ್ಲಿ, ಮಿಸ್ ಇಂಡಿಯಾ ಆದ ನಂತರ ಪ್ರಿಯಾಂಕಾ ಚೋಪ್ರಾ ಅವರ ಲುಕ್ ಕಾಣಿಸುತ್ತದೆ .ಎರಡು ಚಿತ್ರಗಳ ನಡುವೆ ಕೇವಲ ೧೦ ವರ್ಷಗಳ ವ್ಯತ್ಯಾಸವಿದೆ.ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ಬರೆದಿರುವ ಮೊದಲ ವಿಷಯವೆಂದರೆ ದಯವಿಟ್ಟು ನನ್ನ ೯ ವರ್ಷದ ಅವತಾರವನ್ನು ಟ್ರೋಲ್ ಮಾಡಬೇಡಿ. ಟ್ರೋಲ್ ಮಾಡಬೇಡಿ ಎಂಬ ಮನವಿಯೊಂದಿಗೆ ಪ್ರಾರಂಭವಾದ ಈ ಶೀರ್ಷಿಕೆಯಲ್ಲಿ, ಈ ಬದಲಾವಣೆಯನ್ನು ನೋಡಿ ಸ್ವತಃ ತಮಗೆ ಯಾವ ರೀತಿಯ ಆಶ್ಚರ್ಯವಾಯಿತು ಎಂದು ನಟಿ ತುಂಬು ಹೃದಯದಿಂದ ಬರೆದಿದ್ದಾರೆ.
ಪ್ರಿಯಾಂಕಾ ಕೊನೆಯದಾಗಿ ದಿ ವೈಟ್ ಟೈಗರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿತ್ತು. ರಾಜ್‌ಕುಮಾರ್ ರಾವ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಹಿಂದಿ ಚಿತ್ರಗಳಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಇಂಗ್ಲಿಷ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರು ದಿ ಮ್ಯಾಟ್ರಿಕ್ಸ್ ರಿಸರ್ಕ್ಷನ್ಸ್, ಲವ್ ಎಗೇನ್ ನಲ್ಲಿ ಕಾಣಿಸಿಕೊಂಡರು. ಅವರು ಟೈಗರ್ ಸಾಕ್ಷ್ಯಚಿತ್ರವನ್ನು ಸಹ ನಿರೂಪಿಸಿದ್ದಾರೆ .ಈಗ ಪ್ರಿಯಾಂಕಾ ಹೆಡ್ಸ್ ಆಫ್ ಸ್ಟೇಟ್ ಮತ್ತು ದಿ ಬ್ಲಫ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.