ಆಹಾ ತಮಟರ್ ಬಡಾ ಮಜೇದರ್ ಜಾಲತಾಣದಲ್ಲಿ ಜನಪ್ರಿಯ
ನವದೆಹಲಿ,ಅ.೧-ಆಹಾ ತಮಟರ್ ಬಡಾ ಮಜೇದರ್ ಎಂಬ ಈ ಮಕ್ಕಳ ಕವಿತೆ ಜಾಲತಾಣದಲ್ಲಿ ತುಂಬಾ ಜನಪ್ರಿಯವಾಗಿದೆ, ಮಕ್ಕಳು ಮಾತ್ರವಲ್ಲದೆ ವಯಸ್ಕರು, ಸಾಮಾನ್ಯ ಜನರು ಅನೇಕರು ಮತ್ತು ಯೂಟ್ಯೂಬರ್‌ಗಳು ಸಹ ಈ ಹಾಡಿಗೆ ರೀಲ್‌ಗಳನ್ನು ಮಾಡಿದ್ದಾರೆ.
ಇದೀಗ ನರ್ಸರಿ ಶಿಕ್ಷಕರ ತರಬೇತಿ ಅವಧಿಯಲ್ಲಿ ತರಬೇತಿ ಪಡೆಯುತ್ತಿರುವ ಶಿಕ್ಷಕರ ವೃಂದವು ಆಹಾ ತಮಟರ್ ಬಡಾ ಮಜೇದರ್ ಎಂಬ ತಮಾಷೆಯ ಹಾಡನ್ನು ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ತರಬೇತಿ ಅವಧಿಯಲ್ಲಿ ನರ್ಸರಿ ಶಿಕ್ಷಕರರು ಈ ಹಾಡಿಗೆ ರೀಲ್ ಮಾಡಿ ತೀವ್ರ ಸಂಕಷ್ಟ ಎದುರಿಸಿದ್ದಾರೆ . ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಕೇಲವರು ವೀಡಿಯೊ ಕೇವಲ ಮನರಂಜನೆಗಾಗಿ ಎಂದರೆ, ಮತ್ತೆ ಕೇಲವರು ಶಿಕ್ಷಕರು ಸಮಯ ವ್ಯರ್ಥ ಮಾಡಿದ್ದಾರೆ ಮತ್ತು ವೃತ್ತಿಪರ ತರಬೇತಿ ಅವಧಿಯಲ್ಲಿ ಇಂತಹ ಕೆಲಸ ಅಕ್ಷಮ್ಯ ಅಪರಾಧ ಎಂದಿದ್ದಾರೆ.
ದೃಶ್ಯಾವಳಿಗಳು ತೋರಿಸಿದಂತೆ, ನರ್ಸರಿ ಶಿಕ್ಷಕರ ಗುಂಪು ಶಾಲೆಯ ತರಗತಿಯಲ್ಲಿ ತರಬೇತಿಗೆ ಹಾಜರಾಗಿದ್ದಾರೆ . ವೈರಲ್ ಆದ ಆಹಾ ತಮಟೆ ಹಾಡನ್ನು ಹಾಡಲು ಅವರನ್ನು ಕೇಳಲಾಗಿದೆ. ಶಿಕ್ಷಕರ ಗುಂಪು ಕೈ ಚಲನೆಯೊಂದಿಗೆ ಹಾಡನ್ನು ಹಾಡುತ್ತಿರುವುದು ಕಂಡುಬಂದಿದೆ.
ವಿಡಿಯೋ ಪೋಸ್ಟ್ ಮಾಡಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಕ್ಷಣ ಸಂಸ್ಥೆಯಲ್ಲಿ ಹಾಡನ್ನು ಬಳಸಿದ್ದಕ್ಕಾಗಿ ಪೋಸ್ಟ್ ನಕಾರಾತ್ಮಕ ಕಾಮೆಂಟ್‌ಗಳ ಸುರಿಮಳೆಯನ್ನು ಎದುರಿಸಿದೆ. ತರಬೇತಿ ಅವಧಿಯು ಶಿಕ್ಷಣವನ್ನು ಕಲುಷಿತಗೊಳ್ಳಿಸಲಾಗಿದೆ ಎಂದು ಆರೋಪಿಸಿದೆ.
ಕಾಮೆಂಟ್ ವಿಭಾಗದಲ್ಲಿ ನೆಟಿಜನ್‌ಗಳು ವೀಡಿಯೊದ ಬಗ್ಗೆ ಭಾರೀ ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ.