ಭಾರತ ಹಾಕಿ ತಂಡಕ್ಕೆ ಅದ್ಧೂರಿ ಸ್ವಾಗತ
ನವದೆಹಲಿ.ಆ.೧೦- ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡ ತವರಿಗೆ ಬಂದಿಳಿದಿದ್ದು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪೇನ್ ವಿರುದ್ಧ ಗೆಲ್ಲುವ ಮೂಲಕ ಭಾರತ ಹಾಕಿ ತಂಡ ಕಂಚಿನ ಪದಕಕ್ಕೆ ಮುತ್ತಿಕ್ಕಿತ್ತು.
ಇಂದು ಬೆಳಗ್ಗೆ ಹರ್ಮನ್‌ಪ್ರೀತ್ ನೇತೃತ್ವದ ಭಾರತ ತಂಡ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಆmಗಾರರಿಗೆ ಹೂಗುಚ್ಛ ಮತ್ತು ತ್ರಿವರ್ಣ ಧ್ವಜದ ಅಂಗವಸ್ತ್ರ ಹಾಕಿ ಸ್ವಾಗತಿಸಲಾಯಿತು. ತಂಡದ ಆಟಗಾರರಾದ ಸುಖ್ಜೀತ್ ಮತ್ತು ಮಂದೀಪ್ ಸಿಂಗ್ ಡೋಲು ಸದ್ದಿಗೆ
ಕುಣಿದು ಕುಪ್ಪಳಿಸಿದರು. ಈ ವೇಳೆ ಹಾಕಿ ಅಭಿಮಾನಿಗಳು ಆಟಗಾರರನ್ನು ಹುರಿದುಂಬಿಸಿ ಸಂಭ್ರಮ ಹೆಚ್ಚಿಸಿದರು.
ತಂಡದ ತಾರಾ ಗೋಲ್ ಕೀಪರ್ ಶ್ರೀಜೇಶ್ ಸೇರಿದಂತೆ ಕೆಲ ಆಟಗಾರರು ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಬೇಕಿರುವುದರಿಂದ ತಂಡದೊಂದಿಗೆ ಆಗಮಿಸದೇ ಪ್ಯಾರಿಸ್‌ನಲ್ಲೆ ಉಳಿದಿದ್ದಾರೆ.
ಭಾರತ ಹಾಕಿ ತಂಡದ ಆಟಗಾರರು ಮೇಜರ್ ಧ್ಯಾನ್‌ಚಂದ್ ಮೈದಾನಕ್ಕೆ ತರೆಳಿದ್ದು ಅಭಿಮಾನಿಗಳು ಮತ್ತು ಮಾಧ್ಯಮದವರೊಂದಿಗೆ ಸಂವಾದ ನಡೆಸಲಿದ್ದಾರೆ. ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ೧೩ನೇ ಪದಕ ಗೆದ್ದುಕೊಂಡಿದೆ.