ಡೈವೋರ್ಸ್ ನಂತರ ಖಿನ್ನತೆಗೆ ಒಳಗಾಗಿದ್ದ ನಾಗ ಚೈತನ್ಯ
ಹೈದರಾಬಾದ್,ಅ.೧೦-ಜನಪ್ರಿಯ ಚಿತ್ರನಟ ನಾಗಾರ್ಜುನ ತಮ್ಮ ಪುತ್ರ ನಟ ನಾಗ ಚೈತನ್ಯ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಸೋಭಿತಾ ಧೂಳಿಪಾಲ – ನಾಗ ಚೈತನ್ಯ ತಮ್ಮ ನಿಶ್ಚಿತಾರ್ಥದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಮಂತಾರಿಂದ ಬೇರ್ಪಟ್ಟ ನಂತರ ನಾಗ ಚೈತನ್ಯ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ ಈಗ ನಾಗ ಚೈತನ್ಯ ಮತ್ತೆ ಖುಷಿಯಾಗಿದ್ದಾರೆ… ನಗುನಗುತ್ತಲೇ ಇದ್ದಾರೆ. ನಾಗ ಚೈತನ್ಯ – ಸೋಭಿತಾ ಧೂಳಿಪಾಲ ಬಗ್ಗೆ ನಾಗಾರ್ಜುನ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಾಗಾ ಚೈತನ್ಯ – ಸೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಬಹಳ ಚೆನ್ನಾಗಿ ನಡೆದಿದೆ ಎಂದು ನಾಗಾರ್ಜುನ್ ಹೇಳಿದ್ದಾರೆ. ತಮ್ಮ ಕುಟುಂಬದ ಬೆಂಬಲಕ್ಕೆ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ನಾಗ ಚೈತನ್ಯ ಮತ್ತೆ ಖುಷಿಯಾಗಿದ್ದಾರೆ.. ತುಂಬಾ ಖುಷಿಯಾಗಿದ್ದಾರೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಸಮಂತಾ – ನಾಗ ಚೈತನ್ಯ ಡೈವೋರ್ಸ್ ವಿಷಯ ಅರಗಿಸಿಕೊಳ್ಳುವುದು ಕುಟುಂಬಕ್ಕೆ ಸುಲಭವಾಗಿರಲಿಲ್ಲ ತುಂಬಾ ಕಷ್ಟದ ಸಮಯ ಎಂದು ನಾಗಾರ್ಜುನ್ ನೆನಪಿಸಿಕೊಂಡಿದ್ದಾರೆ. ಸಮಂತಾ ವಿಚ್ಛೇದನದ ನಂತರ ನಾಗ ಚೈತನ್ಯ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.ಆದರೆ ನಾಗ ಚೈತನ್ಯ ತನ್ನ ನೋವನ್ನು ಯಾರಿಗೂ ಹೇಳಲಿಲ್ಲ ಎಂದು ನಾಗಾರ್ಜುನ ಹೇಳಿದ್ದಾರೆ. ಆದರೆ ಮಗನಿಗೆ ನೆಮ್ಮದಿ ಇಲ್ಲ ಎಂಬುದು ತಿಳಿದಿತ್ತು ಎಂದಿದ್ದಾರೆ.
ಈಗ ಮತ್ತೆ ಚೈತನ್ಯ ನಗುವುದನ್ನು ನೋಡುತ್ತಿದ್ದೇನೆ ಎನ್ನುತ್ತಾರೆ ನಾಗಾರ್ಜುನ್. ಶೋಭಿತಾ ಮತ್ತು ಚೈತನ್ಯ ಅದ್ಭುತ ಜೋಡಿ.. ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ. ತಮ್ಮ ಕುಟುಂಬಕ್ಕೆ ಇದು ತುಂಬಾ ಸಂತೋಷದ ಸಮಯ ಎಂದು ಹೇಳಿದ್ದಾರೆ. ನಾಗಾರ್ಜುನ ಕೂಡ ತಮ್ಮ ಮಗ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ.
ಸೋಭಿತಾ – ಚೈತನ್ಯ ಮದುವೆಯಾಗಲು ಬಯಸಿದ್ದಾರೆ. ಆದರೆ ಮದುವೆ ತಕ್ಷಣವೇ ಆಗುವುದಿಲ್ಲ ಎಂದಿದ್ದಾರೆ. ಶೋಭಿತಾ ಮತ್ತು ಚೈ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಭಾಗವಹಿಸಿದ್ದರು ಎಂದು ನಾಗಾರ್ಜುನ್ ಬಹಿರಂಗಪಡಿಸಿದ್ದಾರೆ. ಶೋಭಿತಾ ಅವರ ಪೋಷಕರು ಮತ್ತು ಅವರ ಸಹೋದರಿ ಉಪಸ್ಥಿತರಿದ್ದರು. ನಾಗ ಚೈತನ್ಯ ಅವರ ತಾಯಿ ಲಕ್ಷ್ಮೀ ,ಅಮಲಾ, ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.