ಕೆನೆ ಪದರ ವರ್ಗಕ್ಕೆ ಮೀಸಲಾತಿಯಿಲ್ಲ
ನವದೆಹಲಿ, ಆ. ೧೦- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಕೆನೆ ಪದರ ವರ್ಗಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ಆಯಾಯ ಸರ್ಕಾರಕ್ಕೆ ಇದೆ. ಈ ನಿಟಿನಲ್ಲಿ ಎನ್ ಡಿಎ ಸರ್ಕಾರ ಬಂಧವಾಗಿದೆ. ರಾಜ್ಯಗಳಲೂ ಕೆನೆ ಪದರ ವರ್ಗವನ್ನು ಗುರುತಿಸಿ ಅವುಗಳನ್ನು ಮೀಸಲಾತಿಯಿಂದ ಹೊರಗಿಡಬಹುದು ಎಂದು ನೀಡಿರುವ ಸುಪ್ರೀಂಕೋರ್ಟ್ ಹೇಳಿಕೆಯನ್ನು ಕೇಂದ್ರ ಗಮನಿಸಿದೆ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ವಿವರಿಸಿರುವಂತೆ ಪರಿಶಿಷ್ಟರ ಒಳಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಚರ್ಚೆ ನಡೆಸಿದ ನಂತರ ಸಚಿವ ವೈಷ್ಣವ್ ಈ ಹೇಳಿಕೆ ನೀಡಿದ್ದಾರೆ.
ಎನ್ ಡಿಎ ಸರ್ಕಾರ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಅನುಸರಿಸಲು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟರ ಮೀಸಲಾತಿಯಲ್ಲಿ ಕೆನೆ ಪದರ ವರ್ಗಕ್ಕೆ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದರು.
ರೈತರ ಸಮಸ್ಯೆಗಳನ್ನು ಮತ್ತಷ್ಟು ಚರ್ಚಿಸಿದ ಅವರು ಕ್ಲೀನ್ ಪ್ಲಾಟ್ ಕಾರ್ಯಕ್ರಮ ಮೂಲಕ ರೈತರ ಆದಾಯ ಸುಧಾರಿಸುವ ಪ್ರಮುಖ ನಿರ್ಧಾರವನ್ನು ಸಹ ಪ್ರಕಟಿಸಿದರು.