ಜಾನ್ವಿ ಶೇರ್ ಮಾಡಿರುವ ತೆರೆಮರೆಯ ವಿಡಿಯೋ
ಹೈದರಾಬಾದ್,ಅ.೯-ಜೂನಿಯರ್ ಎನ್ಟಿಆರ್ ಮತ್ತು ಜಾನ್ವಿ ಕಪೂರ್ ಅಭಿನಯದ ದೇವರ ಮೊದಲ ಭಾಗ ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ದೇವರ ಚಿತ್ರದ ‘ಚುಟ್ಟಮಲ್ಲೆ’ ಹಾಡು ದಾಖಲೆಗಳನ್ನು ಸೃಷ್ಟಿಸುತ್ತದೆ. ಇತ್ತೀಚೆಗೆ ಜಾನ್ವಿ ಕಪೂರ್ ಈ ಹಾಡಿನ ಬಿಟಿಎಸ್ (ಬಿಹೈಂಡ್ ದಿ ಸೀನ್ಸ್) ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಬಿಡುಗಡೆಯಾದ ಎರಡೇ ದಿನಗಳಲ್ಲಿ ಈ ಹಾಡು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿ ದಾಖಲೆಯ ಮಟ್ಟವನ್ನು ಗಳಿಸಿದೆ.ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂ.೧ ಸ್ಥಾನದಲ್ಲಿ ಮುಂದುವರಿದಿದೆ. ಈ ಹಾಡು ಇದುವರೆಗೆ ೪೫ ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ ಎಂದು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಈ ಹಾಡು ಕೇಳಿಬರುತ್ತಿದೆ. ಅದರಲ್ಲೂ ಎನ್‌ಟಿಆರ್ ಮತ್ತು ಜಾನ್ವಿ ನಡುವಿನ ರೊಮ್ಯಾಂಟಿಕ್ ಸ್ಟೆಪ್‌ಗಳು ಅಭಿಮಾನಿಗಳು ಫೀದಾ ಆಗಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗಿದೆ.ಜಾಹ್ನವಿ ಬಿಳಿ ಬಣ್ಣದ ಮಾದಕ ಉಡುಗೆಯಲ್ಲಿ ಅಪ್ಸರೆಯಂತೆ ಕಂಗೋಳಿಸಿದ್ದಾರೆ.
’ದೇವರ’ ಹಾಡಿನಲ್ಲಿರುವಷ್ಟು ಸುಂದರಿಯಾಗಿ ಆಕೆಯನ್ನು ತೋರಿಸಲು ಇದುವರೆಗೆ ಬಾಲಿವುಡ್‌ನಲ್ಲಿ ಯಾರಿಗೂ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ವಿಡಿಯೋ ತುಣುಕು ವಿಕ್ಷೀಸಿದ ಜಾಹ್ನವಿ ಗೆಳೆಯ ಶಿಖರ ಪಹಾಡಿಯಾ ದೇವತೆ ಎಂದು ಹೊಗಳಿದ್ದಾರೆ.
ಈ ಚಿತ್ರದ ಎರಡನೇ ಹಾಡು ಆಗಸ್ಟ್ ೫ ರಂದು ಬಿಡುಗಡೆಯಾಗಿದೆ. ತಮಿಳಿನಲ್ಲಿ ’ಪಟ್ಟವೈಕುಂ’ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ನಿರ್ದೇಶಕ ವಿಘ್ನೇಶ್ ಶಿವನ್ ಬರೆದಿದ್ದಾರೆ. ಸದ್ಯ ಈ ಹಾಡು ಅಂತರ್ಜಾಲದಲ್ಲಿ ಟ್ರೆಂಡ್ ಆಗಿದೆ. ಇದಕ್ಕೆ ಪ್ರಮುಖ ಕಾರಣ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್.
ಈ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಜಾಹ್ನವಿ ಕಪೂರ್ ತಮ್ಮ ಮೊದಲ ಚಿತ್ರದಲ್ಲೇ ಗ್ಲಾಮರಸ್ ಅವಕಾಶ ದೊರೆತಿದೆ, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಹಾಡಿನ ಮೂಲ ವೀಡಿಯೊದಲ್ಲಿ ಜಾನ್ವಿ ಕಪೂರ್ ಮತ್ತು ಜೂನಿಯರ್ ಎನ್‌ಟಿಆರ್ ಹಾಡಗೆ ರೋಮ್ಯಾನ್ಸ್ ಮಾಡಿದ್ದಾರೆ.
ಚಿತ್ರ ಸೆಪ್ಟೆಂಬರ್ ೨೭ ರಂದು ತೆರೆಗೆ ಬರಲಿದೆ. ಈ ಚಿತ್ರ ಎರಡು ಭಾಗಗಳಲ್ಲಿ ತೆರೆಕಾಣಲಿದೆ. ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಈ ಚಿತ್ರವು ಆಕ್ಷನ್ ಥ್ರಿಲ್ಲರ್ ಆಗಲಿದೆ.