ಟ್ರಂಪ್ ಸೋತರೆ ಶಾಂತಿಯುತಅಧಿಕಾರ ಹಸ್ತಾಂತರ ಅನುಮಾನ
ವಾಷಿಂಗ್ಟನ್,ಆ.೮- ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತರೆ ಶಾಂತಿಯುತ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ಮುನ್ಸೂಚನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನೀಡಿದ್ದಾರೆ.
ಕಳೆದ ತಿಂಗಳು ಅವರು ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಿಂದ ನಾಟಕೀಯವಾಗಿ ಹಿಂದೆ ಸರಿದ ಬಳಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಪ್ರಚಾರದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರಾಭವಗೊಂಡರೆ ಅಮೆರಿಕಾದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ. ಸೋಲಿನ ಹತಾಶೆಯಾಗಿ ಏನು ಮಾಡಲು ಅವರು ಸಿದ್ದರಿದ್ದಾರೆ. ಅದಕ್ಕೆ ಹಿಂದಿನ ಘಟನೆಗಳೇ ಕಾರಣ ಎಂದು ಅವರು ಹೇಳಿದ್ದಾರೆ.
.ಮಾರ್ಚ್‌ನಲ್ಲಿ ವಾಹನೋದ್ಯಮದ ಬಗ್ಗೆ ಮಾತನಾಡುತ್ತಿದ್ದ ವೇಳೆ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಹೇಳಿಕೆ ಉಲ್ಲೇಖಿಸಿ ಮಾತನಾಡಿದ ಅವೆರು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತರೆ “ದೇಶದಲ್ಲಿ ರಕ್ತಪಾತ” ವಾಗಲಿದೆ ಎಂದು ಮುಂಚೆಯೇ ಹೇಳಿದ್ದಾರೆ. ಅ ರೀತಿ ಮಾಡಲು ಅವರು ಹಿಂಜರಿಯರು ಎಂದು ತಿಳಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಕ್ತಪಾತದ ರಾಜಕಾರಣ ಪ್ರೋತ್ಸಾಹಿಸುತ್ತಿದ್ದಾರೆ. ಹೀಗಾಗಿ ಅವರು ಚುನಾವಣೆಯಲ್ಲಿ ಸೋತರೆ ದೇಶದಲ್ಲಿ ರಕ್ತಪಾತ ಆಗುವುದು ಖಚಿತ ಇದನ್ನು ತಡೆಯಲು ಕೂಡ ತಮ್ಮ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ “ರಾಜಕೀಯ ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ ಇಂಥವರನ್ನ ಅಮೆರಿಕದ ಜನತೆ ಎಂದಿಗೂ ಕ್ಷಮಿಸಬಾರದು ಎಂದು ಅವರು ತಿಳಿಸಿದ್ದಾರೆ ಡೊನಾಲ್ಡ್ ಟ್ರಂಪ್ ಅವರ ಪ್ರಚಾರ ನಿರ್ದಿಷ್ಟವಾಗಿ ಆಟೋ ಉದ್ಯಮದ ಬಗ್ಗೆ ಮತ್ತು ಉದ್ದೇಶಪೂರ್ವಕವಾಗಿ ಸಂದರ್ಭದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ ಅವರು ರಾಜಕೀಯ ವಿರೋಧಿಗಳು ಮತ್ತು ಇತರರು ಅವರನ್ನು “ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.