ಗರ್ಭಿಣಿ ದೀಪಿಕಾ ವಿಡಿಯೊ ವೈರಲ್
ಮುಂಬೈ,ಅ.೯-ತಾಯಿಯಾಗಲಿರುವ ನಟಿ ದೀಪಿಕಾ ಪಡುಕೋಣೆ ಕಳೆದ ರಾತ್ರಿ ಮುಂಬೈನಲ್ಲಿ ಊಟಕ್ಕೆ ಹೊರಗೆ ಹೋಗಿದ್ದರು. ಅದರ ವೀಡಿಯೊ ಸದ್ಯಕ್ಕೆ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ದೀಪಿಕಾ ಹಸಿರು ಬಣ್ಣದ ಹೂವಿನ ಕುರ್ತಾ ಮತ್ತು ಬಿಳಿ ಪೈಜಾಮಾದ ಗರ್ಭಧಾರಣೆಯ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆಕೆಯ ಮುಖದಲ್ಲಿ ಗರ್ಭಾವಸ್ಥೆಯ ಹೊಳಪನ್ನು ಸಹ ಸ್ಪಷ್ಟವಾಗಿ ಕಾಣಬಹುದು. ಈ ವೇಳೆ, ಅವರ ಸುರಕ್ಷತೆಗಾಗಿ ಅಂಗರಕ್ಷಕ ಜಲಾಲ್ ಕೂಡ ಕಾಣಿಸಿಕೊಂಡಿದ್ದಾರೆ, ದಿಪೀಕಾ ಪ್ರತಿ ಹೆಜ್ಜೆಯಲ್ಲೂ ಜಲಾಲ್ ಕಣ್ಣಿಟ್ಟಿರುವುದು ಕಂಡುಬಂದಿದೆ. ಈ ವೇಳೆ ದೀಪಿಕಾಳನ್ನು ನೋಡಿ ಅವರ ಚಿತ್ರಗಳನ್ನು ಕ್ಲಿಕ್ಕಿಸಲು ಪಾಪರಾಜಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ನಟಿ ತನ್ನ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ, ಅವರು ಮಧ್ಯ ನಿಂತು ನಗುತ್ತಾ ಎಲ್ಲರೊಂದಿಗೆ ಛಾಯಾಚಿತ್ರವನ್ನು ತೆಗೆದುಕೊಳ್ಳುತ್ತಿದ್ದರು. ಈ ಸಮಯದಲ್ಲಿ, ನಟಿ ಅಭಿಮಾನಿಯ ಮಗುವನ್ನು ಮುದ್ದಿಸುತ್ತಿರುವುದು ಕಂಡುಬಂದಿದೆ. ನಟಿ ತನ್ನ ಅಭಿಮಾನಿಯೊಬ್ಬನ ಮಗುವನ್ನು ಮೊದಲು ಹೇಗೆ ಮುದ್ದಿಸುತ್ತಾಳೆ ಮತ್ತು ನಂತರ ಅವನೊಂದಿಗೆ ಫೋಟೋ ಕ್ಲಿಕ್ಕಿಸುತ್ತಾಳೆ ಎಂಬುದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಜನರು ದೀಪಿಕಾ ಅವರ ಈ ಸ್ಟೈಲ್ ತುಂಬಾ ಇಷ್ಟಪಡುತ್ತಿದ್ದಾರೆ, ಅವರ ಈ ವೀಡಿಯೊಗೆ ಎಲ್ಲರೂ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ದಿನಗಳಲ್ಲಿ ದೀಪಿಕಾ ಪಡುಕೋಣೆ ತಮ್ಮ ಗರ್ಭಧಾರಣೆಯ ಹಂತವನ್ನು ಆನಂದಿಸುತ್ತಿದ್ದಾರೆ. ರಣವೀರ್ ಮತ್ತು ದೀಪಿಕಾ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ದೀಪ್ಕಾ-ರಣವೀರ್ ಈ ವರ್ಷದ ಫೆಬ್ರವರಿಯಲ್ಲಿ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ . ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬೇಬಿ ’ದೀಪ್‌ವೀರ್’ ಆಗಮಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಅಂದರೆ ಈಗ ದೀಪಿಕಾ ತಾಯಿಯಾಗಲು ಕೇವಲ ೨ ತಿಂಗಳು ಮಾತ್ರ ಬಾಕಿ ಇದೆ.