ಲಂಚ ಸ್ವೀಕಾರ, ಇಡಿ ಉನ್ನತಾಧಿಕಾರಿ ಬಂಧನ
ಮುಂಬೈ, ಆ.೯ ಆಭರಣ ವ್ಯಾಪಾರಿಯಿಂದ ೨೦ ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಜಾರಿ ನಿರ್ದೇಶನಾಲಯದ ಉನ್ನತ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣಗಳ ತನಿಖೆಯ ಹೊಣೆಗಾರಿಕೆಯಿರುವ ಕೇಂದ್ರೀಯ ಸಂಸ್ಥೆಯ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಯಾದವ್ ಜಾರಿ ನಿರ್ದೇಶನಾಲಯದ ತನಿಖೆಯಲ್ಲಿರುವ ವ್ಯಕ್ತಿಯಿಂದ ಮೊತ್ತವನ್ನು ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿzಬುಧವಾರ ರಾತ್ರಿ ದೆಹಲಿ ಸಿಬಿಐನ ಮುಂಬೈ ಘಟಕ ಬಂಧಿಸಿದೆ. ಸಿಬಿಐ ಚಾರ್ಜ್‌ಶೀಟ್ ಪ್ರಕಾರ, ಜಾರಿ ನಿರ್ದೇಶನಾಲಯವು ಆಗಸ್ಟ್ ೩ ಮತ್ತು ೪ ರಂದು ಆಭರಣ ವ್ಯಾಪಾರಿಯ ಆವರಣದಲ್ಲಿ ಶೋಧ ನಡೆಸಿತ್ತು.
ನಂತರ ಅಧಿಕಾರಿ ಯಾದವ್ ಅವರು ಆಭರಣ ವ್ಯಾಪಾರಿಯ ಮಗನಿಗೆ ೨೫ ಲಕ್ಷ ರೂಪಾಯಿ ನೀಡದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು. ಸಿಬಿಐ ತನಿಖೆಯಿಂದ ಕಂಡುಬಂದಂತೆ ಮಾತುಕತೆಯ ಸಮಯದಲ್ಲಿ, ಲಂಚದ ಮೊತ್ತವನ್ನು ೨೦ ಲಕ್ಷಕ್ಕೆ ಇಳಿಸಲಾಗಿತ್ತು.
ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸಂದೀಪ್ ಸಿಂಗ್ ಯಾದವ್ ವಿರುದ್ಧ ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸಿದೆ ಎಂದು ಸಿಬಿಐ ಹೇಳಿದೆ.