ಚಿನ್ನ ಗೆದ್ದವನೂ ನನ್ನ ಮಗನೆ: ನೀರಜ್ ತಾಯಿ
ನವದೆಹಲಿ.ಆ.೯-ಪಾಕಿಸ್ತಾನದ ಜಾವೆಲಿನ್ ಅಥ್ಲೀಟ್ ಅರ್ಷದ್ ನದೀಮ್ ನನ್ನ ಮಗನಿದ್ದಂತೆ ಎಂದು ನೀರಜ್ ಚೋಪ್ರಾ ಅವರ ತಾಯಿ ಸರೋಜಾ ದೇವಿ ಹೇಳಿದ್ದಾರೆ.
ಪಾಕಿಸ್ತಾನದ ಜಾವೆಲಿನ್ ಅಥ್ಲೀಟ್ ಅರ್ಷಾದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಎರಡನೆ ಪ್ರಯತ್ನದಲ್ಲಿ
ಪಾಕ್‌ನ ಜಾವೆಲಿನ್ ಅಥ್ಲೀಟ್ ಅರ್ಷಾದ್ ನದೀಂ ೯೨.೯೭ ಮೀ. ದೂರ ಎಸೆದು ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು. ಇದರೊಂದಿಗೆ ಈ ಹಿಂದಿನ ಎಲ್ಲಾ ದಾಖಲೆಗಳನ್ನು
ಮುರಿದರು.
ಭಾರತದ ನೀರಜ್ ಚೋಪ್ರಾ ೮೮.೫೪ ಮೀ. ದೂರ ಎಸೆದು ಬೆಳ್ಳಿ ಪದಕ ಪಡೆದರು. ಈ ಕುರಿತು ನೀರಜ್ ತಾಯಿ ಸರೋಜ ದೇವಿ, ಬೆಳ್ಳಿ ಪದಕ ಗೆದ್ದಿರುವುದಕ್ಕೆ ಸಂತಸವಿದೆ. ಚಿನ್ನ ಗೆದ್ದ
ಹುಡುಗ ಕೂಡ ನನ್ನ ಮಗನೇ. ಕಷ್ಟಪಟ್ಟು ಸಾಧನೆ ಮಾಡಿದ್ದಾನೆ. ಪ್ರತಿಯೊಬ್ಬ ಆಟಗಾರನಿಗೂ ಅವನ ದಿನವಿದೆ. ನೀರಜ್ ಗಾಯಗೊಂಡಿದ್ದ. ಅವನ ಪ್ರದರ್ಶನ ಸಂತಸ ನೀಡಿದೆ.ಅವನು ಬಂದಾಗ ನೆಚ್ಚಿನ ಅಡುಗೆ ಮಾಡುತ್ತೇನೆ ಎಂದು ತಾಯಿ ಸರೋಜಾ ದೇವಿ ಹೇಳಿದ್ದಾರೆ.
ಸರೋಜಾ ದೇವಿ ಅವರ ಮಾತನ್ನು ಕೇಳಿ ಪಾಕ್ ನೆಟ್ಟಿಗರು ಸೆಲ್ಯೂಟ್ ಹೊಡೆದು ಮೆಚ್ಚುಗೆ ಸೂಚಿಸಿದ್ದಾರೆ.