ಸೆ. 10 ಟ್ರಂಪ್, ಹ್ಯಾರಿಸ್ ಮುಖಾಮುಖಿ
ವಾಷಿಂಗ್ಟನ್, ಆ.೯ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಸೆಪ್ಟಂಬರ್ ೧೦ ರಂದು ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಳಾದ ಕಮಲಾ ಹ್ಯಾರೀಸ್ ಮತ್ತು ಡೋನಾಲ್ಡ್ ಟ್ರಂಪ್ ನಡುವೆ ಮೊದಲ ಮುಖಾಮುಖಿ ಚರ್ಚೆ ಏರ್ಪಡಿಸಲಾಗಿದೆ
ನವೆಂಬರ್ ೫ ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳನ್ನು ಮುಖಾ ಮುಖಿ ಮಾಡಿಸುವ ನಿಟ್ಟಿನಲ್ಲಿ ದಿನಾಂಕ ನಿಗಧಿ ಮಾಡಲಾಗಿದೆ.
ಖಾಸಗೀ ವಾಹಿನಿಯೊಂದು ಈ ಚರ್ಚೆ ಹಮ್ಮಿಕೊಂಡಿದ್ದು ಅಲ್ಲಿ ಅಮೇರಿಕಾದ ಬೆಳವಳಿಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಇಬ್ಬರೂ ಅಭ್ಯರ್ಥಿಗಳು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸುವುದನ್ನು ಎದುರು ನೋಡುತ್ತಿರುವುದಾಗಿ ಮಾಜಿ ಅಧ್ಯಕ್ಷ ಹಾಗು ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
“ನಾವು ಮೂರು ಚರ್ಚೆ ಮಾಡಬೇಕೆಂದು ನಾವು ಭಾವಿಸುತ್ತೇವೆ”, ಫಾಕ್ಸ್ ನ್ಯೂಸ್ ಮತ್ತು ಎನ್‌ಬಿಸಿ ಕ್ರಮವಾಗಿ ಚರ್ಚೆಯನ್ನು ಆಯೋಜಿಸಲಿವೆ ಎಂದಿದ್ಧಾರೆ
ಮಿಚಿಗನ್‌ನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಚರ್ಚೆಗೆ ಹಾಜರಾಗುವುದಾಗಿ ಕಮಲಾ ಹ್ಯಾರೀಸ್ ತಿಳಿಸಿದ್ದಾರೆ
ವಲ್ರ್ಡ್ ನ್ಯೂಸ್ ಟುನೈಟ್ ಆಂಕರ್ ಮತ್ತು ಮ್ಯಾನೇಜಿಂಗ್ ಎಡಿಟರ್ ಡೇವಿಡ್ ಮುಯಿರ್ ಮತ್ತು ಎಬಿಸಿ ನ್ಯೂಸ್ ಲೈವ್ ಪ್ರೈಮ್ ಆಂಕರ್ ಲಿನ್ಸೆ ಡೇವಿಸ್ ಅವರು ಚರ್ಚೆಯನ್ನು ಮಾಡರೇಟ್ ಮಾಡುತ್ತಾರೆ ಎಂದು ವಾಹಿನಿ ತಿಳಿಸಿದೆ
ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ ಮತ್ತು ನಮಗೆ ಸೆಪ್ಟೆಂಬರ್ ೧೦ ರ ದಿನಾಂಕವಿದೆ. ಅವರು ಅಂತಿಮವಾಗಿ ಅದಕ್ಕೆ ಬದ್ಧರಾಗಿದ್ದಾರೆಂದು ಎಂದು ಕಮಲಾ ಹ್ಯಾರೀಸ್ ಹೇಳಿದ್ದಾರೆ.