ವಕ್ಫ್ ಮಸೂದೆ ಜಟಾಪಟಿ
ನವದೆಹಲಿ,ಆ. ೮- ವಕ್ಫ್ ಮಂಡಳಿಗಳಲ್ಲಿ ಮಹಿಳೆಯರನ್ನು ಕಡ್ಡಾಯವಾಗಿ ಸೇರಿಸುವುದು ಸೇರಿದಂತೆ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಗುರಿ ಹೊಂದಿರುವ ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿಂದು ಕೇಂದ್ರ ಸರ್ಕಾರ ಮಂಡಿಸಿದ್ದು ಆಡಳಿತ ಮತ್ತು ಪ್ರತಿ ಪಕ್ಷಗಳ ವಾಕ್ಸಮರಕ್ಕೆ ವೇದಿಕೆಯಾಗಿದೆ.
ಈ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಹೆಚ್ಚಿನ ಸಮಾಲೋಚನೆಗಾಗಿ ಕಳುಹಿಸುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಸದನದಲ್ಲಿ ಬಾರಿ ಗದ್ದಲ ಸೃಷ್ಟಿ ಮಾಡಿದ್ದು ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರಕ್ಕೆ ವೇದಿಕೆಯಾದ ಘಟನೆ ನಡೆದಿದೆ.ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಕ್ಫ್‌ತಿದ್ದು ಪಡಿ ಮಸೂದೆ ಮಂಡಿಸಿ ದೇಶದ ವಕ್ಪ್ ಮಂಡಳಿಗಳಲ್ಲಿ ಪಾರದರ್ಶಕತೆ ತರಲು ಈ ಮಸೂದೆ ಮಂಡಿಸಲಾಗಿದೆ. ಇದರಿಂದ ವಕ್ಫ್ ಮಂಡಳಿಗಳಲ್ಲಿ ಅಧಿಕಾರ ಸುಗಮವಾಲಿದೆ ಎಂದು ಹೇಳಿದರು.ಈ ಹಂತದಲ್ಲಿ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸದಸ್ಯರು ತೀವ್ರ ಆಕ್ಷೇಪಿಸಿದರು. ಮದ್ಯ ಪ್ರವೇಶಿಸಿದ ಸಭಾಧ್ಯಕ್ಷ ಓಂ ಬಿರ್ಲಾ ಅವರು ಸದಸ್ಯರು ನೋಟೀಸ್ ನೀಡದೆ ಹಲವು ಮಂದಿ ಏಕಕಾಲದಲ್ಲಿ ಮಾತನಾಡಲು ಮುಂದಾದರೆ ಸದನ ನಡೆಸುವುದಾದರು ಹೇಗೆ ಎಂದು ಪ್ರತಿಪಕ್ಷಗಳ ಸದಸ್ಯರ ನಡೆಯನ್ನು ತರಾಟೆಗೆ ತೆಗೆದುಕೊಂಡರು.ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ವಕ್ಫ್ ತಿದ್ದುಪಡಿ ಮಸೂದೆ, ೨೦೨೪ ಅನ್ನು ವಿರೋಧಿಸಿ, ಅಲ್ಪ ಸಂಖ್ಯಾತ ಸಮುದಾಯವನ್ನು ಹತ್ತಿಕ್ಕುವ ಕೆಲಸ ಮಾಡಲಾಗಿತ್ತಿದೆ ಎಂದು ಹರಿಹಾಯ್ದರು.ಜೊತೆಗೆ “ಈ ಮಸೂದೆಯು ಸಂವಿಧಾನದ ಮೇಲಿನ ಮೂಲಭೂತ ದಾಳಿಯಾಗಿದೆ. ಈ ಮಸೂದೆಯ ಮೂಲಕ ಅವರು ಮುಸ್ಲಿಮೇತರರೂ ವಕ್ಫ್ ಆಡಳಿತ ಮಂಡಳಿಯ ಸದಸ್ಯರಾಗಬೇಕೆಂಬ ನಿಬಂಧನೆ ಹಾಕುತ್ತಿದ್ದಾರೆ. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ..ಮುಂದೆ ನೀವು ಕ್ರಿಶ್ಚಿಯನ್ನರ ಕಡೆಗೆ ಹೋಗುತ್ತೀರಿ, ನಂತರ ಜೈನರು … ಭಾರತ ವಿಭಜಕ ರಾಜಕೀಯ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ಹೇಳಿದರು.ನಾವು ಹಿಂದೂಗಳು ಆದರೆ ಅದೇ ಸಮಯದಲ್ಲಿ, ನಾವು ಇತರ ಧರ್ಮಗಳ ನಂಬಿಕೆಯನ್ನು ಗೌರವಿಸಬೇಕಾಗಿದೆ. ಈ ಮಸೂದೆಯು ಮಹಾರಾಷ್ಟ್ರ, ಹರಿಯಾಣ ಚುನಾವಣೆಯನ್ನು ಮುಂದಿಟ್ಟುಕೊಂಡು ತಿದ್ದುಪಡಿ ಮಸೂದೆ ಮಂಡಿಸಲಾಗಿದೆ.ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಬಹುಮತ ನೀಡದೆ ಪಾಠ ಕಲಿಸಿದ್ದಾರೆ.ಆದರೂ ಈ ರೀತಿಯ ಮಸೂದೆಗಳನ್ನು ತರುವ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಮಾಡುವುದು ಖಂಡನಾರ್ಹ ಎಂದರು
ಡಿಎಂಕೆ ಸಂಸದೆ ಕನಿಮೊಳಿ ಅವರು, ವಕ್ಷ್ ತಿದ್ದು ಪಡಿ ಮಸೂದೆ “ಅಲ್ಪಸಂಖ್ಯಾತರು ತಮ್ಮ ಸಂಸ್ಥೆಗಳನ್ನು ನಿರ್ವಹಿಸಲು ವ್ಯವಹರಿಸುವ ೩೦ ನೇ ವಿಧಿಯ ನೇರ ಉಲ್ಲಂಘನೆಯಾಗಿದೆ. ಈ ಮಸೂದೆ ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾದ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ನೇರ ವಾಗ್ದಾಳಿ ನಡೆಸಿದರು.
ಪಾರದರ್ಶಕತೆ ತರಲು ಕ್ರಮ
ವಕ್ಫ್ ತಿದ್ದುಪಡಿ ಮಸೂದೆ ವಕ್ಪ್ ಮಂಡಳಿ ತಿದ್ದುಪಡಿ ಮಸೂದೆ ಪಾರದರ್ಶಕತೆ ತರಲು ಸಹಕಾರಿ ಎಂದು ಕೇಂದ್ರ ಸಚಿವ ರಾಜೀವ್ ರಂಜನ್ ಹೇಳಿದ್ದಾರೆ
ಈ ಮಸೂದೆ ಮುಸ್ಲಿಮರ ವಿರುದ್ಧ ಅಲ್ಲ, ಪಾರದರ್ಶಕತೆ ತರಲು ಈ ಕಾನೂನನ್ನು ಮಾಡಲಾಗುತ್ತಿದೆ… ಪ್ರತಿಪಕ್ಷಗಳು ಇದನ್ನು ದೇವಾಲಯಗಳೊಂದಿಗೆ ಹೋಲಿಸುತ್ತಿವೆ. , ಅವರು ಮುಖ್ಯ ವಿಷಯದಿಂದ ಬೇರೆಡೆಗೆ ತಿರುಗುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕೆಸಿ ವೇಣುಗೋಪಾಲ್ ಅವರು ಸಾವಿರಾರು ಸಿಖ್ಖರನ್ನು ಹೇಗೆ ಕೊಂದರು ಎಂಬುದನ್ನು ವಿವರಿಸಬೇಕು…ಇಂದಿರಾ ಗಾಂಧಿಯನ್ನು ಕೊಂದ ಟ್ಯಾಕ್ಸಿ ಡ್ರೈವರ್ ಈಗ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ