ಬಾಂಗ್ಲಾ:ಆತಂಕದಲ್ಲಿ ಭಾರತೀಯರು
ನವದೆಹಲಿ,ಆ.೭- ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೃಹತ್ ಹೋರಾಟ ಮತ್ತು ಹಿಂಸಾಚಾರದಲ್ಲಿ ಹಿಂದೂ ಸಮುದಾಯದ ಮಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ.
ಹಿಂದೂ ಸಮುದಾಯದ ಮಂದಿ ಇರುವ ಮನೆಗಳು, ಜನ ವಸತಿ ಪ್ರದೇಶಗಳು, ದೇವಸ್ಥಾನಗಳು ಸೇರಿದಂತೆ ಇನ್ನಿತರೆ ಚಟುಚಟಿಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದರಿಂದ ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಗಂಟೆಗಳ ನಂತರ, ರಾಜಧಾನಿ ಢಾಕಾ ಸೇರಿದಂತೆ ವಿವಿಧ ಭಾಗಗಳಲ್ಲಿ ಹಿಂದೂಗಳಿಗೆ ಕಿರುಕುಳ ನೀಡುವ ಕೆಲಸ ನಡೆಯುತ್ತಿದೆ
ಅಲ್ಲಿರುವ ಹಿಂದೂ ಸಮುದಾಯದ ಅವಿರೂಪ್ ಸರ್ಕಾರ್ ಪ್ರತಿಕ್ರಿಯಿಸಿ ಬಾಂಗ್ಲಾದೇಶದಲ್ಲಿ ಶೇಕಡಾ ೯೦ರಷ್ಟು ಮುಸ್ಲಿಂ ಸಮುದಾಯದ ಮಂದಿ ಇದ್ದಾರೆ. ಶೇಕಡಾ ೧೦ ರಷ್ಟು ಮಂದಿಯಲ್ಲಿ ಬಹುತೇಕರು ಹಿಂದುಗಳಿದ್ದಾರೆ. ಇನ್ನುಳಿದಂತೆ ಬೌದ್ದರು ಮತ್ತು ಕ್ರಿಶ್ಚಿಯನ್ನರು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ
ಢಾಕಾದಿಂದ ಉತ್ತರಕ್ಕೆ ಸುಮಾರು ೬೨ ಮೈಲುಗಳ ದೂರದಲ್ಲಿ ನದಿಗಳಿಂದ ಆವೃತವಾಗಿರುವ ಜಿಲ್ಲೆಯ ನೆಟ್ರೋಕೋನಾದಲ್ಲಿ ಮಿಶ್ರ ನೆರೆಹೊರೆಯಲ್ಲಿ ವಿಸ್ತಾರವಾದ ಜಂಟಿ ಕುಟುಂಬದ ಮನೆಯಲ್ಲಿ ವಾಸಿಸುತ್ತಿದ್ದು ಇಲ್ಲಿ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದಿದ್ದಾರೆ
ಮನೆಯ ಮೇಲೆ ಗುಂಪೊಂದು ದಾಳಿ ಮಾಡಿ ಲೂಟಿ ಮಾಡಿದೆ. ಹಿಂದೂಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ
ಸುಮಾರು ೧೦೦ ಜನರ ಗುಂಪು ಕೋಲುಗಳಿಂದ ಶಸ್ತ್ರಸಜ್ಜಿತರಾಗಿ ಮನೆಗೆ ನುಗ್ಗಿ ಪೀಠೋಪಕರಣಗಳು, ಟಿವಿ, ಸ್ನಾನಗೃಹದ ಫಿಟ್ಟಿಂಗ್‌ಗಳು ಮತ್ತು ಬಾಗಿಲುಗಳನ್ನು ಒಡೆದು ಹಾಕಿದ್ದಾರೆ. ನಾವು ಏನು ಮಾಡದ ಸ್ಥಿತಿಯಲ್ಲಿ ಇದ್ದೇವೆ ಎಂದು ಅವರು ತಿಳಿಸಿದ್ದಾರೆ
ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರನ್ನು ಹೆಚ್ಚಾಗಿ ಶೇಖ್ ಹಸೀನಾ ಅವರ ಜಾತ್ಯತೀತ ಅವಾಮಿ ಲೀಗ್ ಪಕ್ಷದ ಬೆಂಬಲಿಗರಾದ ಹಿನ್ನೆಲೆಯಲ್ಲಿ ಈ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದ್ದಾರೆ