ಒಲಿಂಪಿಕ್ಸ್ : ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಫೈನಲ್ ಗೆ
ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ‌ಕ್ರೀಡಾಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ವಿಭಾಗದಲ್ಲಿ ಫೈನಲ್ ಗೆ ಲಗ್ಗೆ ಹಾಕಿದ್ದಾರೆ.
ಈ ಸಾಧನೆಯೊಂದಿಗೆ ಮತ್ತೊಮ್ಮೆ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದಾರೆ ಚೋಪ್ರಾ.
ಇಂದು ನಡೆದ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 89.34 ಮೀಟರ್ ಎಸೆದು ಈ ಸಾಧನೆ ಮಾಡುವಲ್ಲಿ ಸಫಲರಾದರು.
ಪ್ರಸಕ್ತ ಅವಧಿಯಲ್ಲಿ ಚೋಪ್ರಾ ಅವರ ಅಮೋಘ ಸಾಧನೆಯಾಗಿದೆ. ಮೂರು ವರ್ಷಗಳ ಹಿಂದೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ, ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಪ್ಯಾರಿಸ್ ನಲ್ಲೂ ಚಿನ್ನದ ಪದಕ ಗಳಿಸುವ ವಿಶ್ವಾಸದಲ್ಲಿದ್ದಾರೆ.
ನೀರಜ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ 87.58 ಮೀಟರ್ ಎಸೆದು ಚಿನ್ನದ ಪದಕ ಗಳಿಸಿದ್ದರು.
ಜೇನಾ ವಿಫಲ
ಇದೇ ವಿಭಾಗದಲ್ಲಿ ಭಾರತದವರೇ ಆದ ಕಿಶೋರ್ ಜೇನಾ ಉತ್ತಮ ಸಾಧನೆ ಮಾಡಲು ವಿಫಲರಾಗಿದ್ದಾರೆ.80.73 ಮೀಟರ್ ಜಾವೆಲಿನ್ ಎಸೆಸದಿರುವ ಅವರು,ಅಂತಿಮ 12ನೇ ಸುತ್ತು ಪ್ರವೇಶಿಸುವ ಸಾಧ್ಯತೆ ಕ್ಷೀಣಿಸಿದೆ.