ಪಿಎಸ್‌ಐ ಶಂಕಾಸ್ಪದ ಸಾವು: ಕಾಂಗ್ರೆಸ್‌ಗೆ ಮುಜುಗರ
ಬೆಂಗಳೂರು, ಆ. ೪- ಯಾದಗಿರಿಯ ಪಿಎಸ್‌ಐ ಪರಶುರಾಮ್ ಅವರ ಶಂಕಾಸ್ಪದ ಸಾವು ಪ್ರಕರಣವನ್ನು ವಿಪಕ್ಷಗಳು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ.
ಈಗಾಗಲೇ ಮುಡಾ ಮತ್ತು ವಾಲ್ಮೀಕಿ ನಿಗಮದ ಹಗರಣಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಿರುವ ದೋಸ್ತಿ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿಗೆ ಪಿಎಸ್‌ಐ ಪರಶುರಾಮ್ ಪ್ರಕರಣ ಈಗ ಮತ್ತೊಂದು ರಾಜಕೀಯ ಅಸ್ತ್ರವಾಗಿ ಸಿಕ್ಕಂತಾಗಿದೆ.
ಇದನ್ನು ಮುಂದಿಟ್ಟುಕೊಂಡು ಎರಡೂ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪಗಳನ್ನು ಮಾಡಿದ್ದಾರೆ.
ವಿಪಕ್ಷಗಳ ಆರೋಪಗಳಿಗೆ ಪ್ರತಿಪಕ್ಷ ಕಾಂಗ್ರೆಸ್ ಸಹ ತಿರುಗೇಟು ನೀಡಿದೆಯಾದರೂ ಪಿಎಸ್‌ಐ ಪರಶುರಾಮ್ ಪ್ರಕರಣ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಈಗಾಗಲೇ ಹೇಳಿದ್ದು, ಪಿಎಸ್‌ಐ ಪರಶುರಾಮ್ ರವರ ಪತ್ನಿಗೆ ಉದ್ಯೋಗ ನೀಡುವುದಾಗಿಯೂ ಹೇಳಿದ್ದಾರೆ. ಇಷ್ಟಾದರೂ ವಿಪಕ್ಷಗಳು ಈ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದು, ಪ್ರತಿಪಕ್ಷ ನಾಯಕ ಆರ್. ಅಶೋಕ್ ಇಂದು ಮೈಸೂರು ಚಲೋ ಪಾದಯಾತ್ರೆಯನ್ನು ಬಿಟ್ಟು ಪರಶುರಾಮ್‌ರವರ ನಿವಾಸಕ್ಕೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ನಡೆಸಿದ್ದಾರೆ.
ಪಿಎಸ್‌ಐ ಪರಶುರಾಮ್ ಸಾವಿನ ವಿಚಾರವಾಗಿ ಅವರ ಪತ್ನಿ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಡಿವೈಎಸ್ಪಿ ಜಾವೇದ್ ಇನಾಂದಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಆರೋಪಿಗಳನ್ನು ಬಂಧಿಸುವ ಬಗ್ಗೆ ಪೊಲೀಸರು ತೀರ್ಮಾನ ಕೈಗೊಳ್ಳಲಿದ್ದಾರೆ.
ಏನಿದು ಪ್ರಕರಣ?
ಪರಿಶಿಷ್ಟ ಜಾತಿಗೆ ಸೇರಿದ ಪಿಎಸ್‌ಐ ಪರಶುರಾಮ್ ರವರು ಕಳೆದ ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಸಾವಿನ ಬಗ್ಗೆ ಅವರ ಪತ್ನಿ ದೂರು ನೀಡಿ ತಮ್ಮ ಪತಿಯ ಸಾವಿಗೆ ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ಕುನ್ನೂರು ಹಾಗೂ ಅವರ ಪುತ್ರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದರಿಂದ ಅವರು ಮನನೊಂದಿದ್ದರು. ಇವರ ಒತ್ತಡದಿಂದಲೇ ತಮ್ಮ ಪತಿ ಸಾವನ್ನಪ್ಪಿದ್ದಾರೆ ಎಂದು ದೂರಿದ್ದರು.
ತಮ್ಮ ಪತಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ೭ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮತ್ತೆ ಅವರನ್ನು ಸಿಇಎನ್ ಠಾಣೆಗೆ ವರ್ಗಾವಣೆ ಮಾಡಿದ್ದರು. ನಗರಠಾಣೆಯಲ್ಲಿ ಮುಂದುವರೆಸಲು ೩೦ ಲಕ್ಷ ರೂ. ನೀಡುವಂತೆ ಶಾಸಕರು ಹಾಗೂ ಅವರ ಪುತ್ರ ಬೇಡಿಕೆ ಇಟ್ಟಿದ್ದರು. ಅವಧಿ ಮುಗಿಯುವವರೆಗೂ ನಗರಠಾಣೆಯಲ್ಲಿ ಮುಂದುವರೆಯುವಂತೆ ಕೋರಿದ್ದರೂ ಶಾಸಕರು ಹಾಗೂ ಅವರ ಪುತ್ರ ಹಣ ಕೊಡದಿದ್ದರೆ ಇಲ್ಲಿ ಏಕೆ ಇರುತ್ತೀಯಾ ಎಂದು ಬೈದು ಜಾತಿ ನಿಂದನೆ ಮಾಡಿದ್ದರು. ಇದರಿಂದ ತಮ್ಮ ಪತಿ ಖಿನ್ನತೆಗೆ ಒಳಗಾಗಿದ್ದರು ಎಂದು ಪತ್ನಿ ದೂರಿದ್ದಾರೆ.
ಈ ಪ್ರಕರಣ ಈಗ ರಾಜ್ಯಾದ್ಯಂತ ಸದ್ದು ಮಾಡಿದ್ದು, ಕಾಂಗ್ರೆಸ್ ಶಾಸಕರ ಹಾಗೂ ಅವರ ಪುತ್ರನ ಹಣದ ಬೇಡಿಕೆಯಿಂದ ನೊಂದು ಪಿಎಸ್‌ಐ ಪರಶುರಾಮ್ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪತ್ನಿಗೆ ಸರ್ಕಾರಿ ನೌಕರಿ
ಯಾದಗಿರ್‌ನ ಮೃತ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪರಶುರಾಂ ಪತ್ನಿಗೆ ಸರ್ಕಾರಿ ಉದ್ಯೋಗದ ಜತೆಗೆ ಪರಿಹಾರವನ್ನೂ ನೀಡಲು ಸರ್ಕಾರ ನಿರ್ಧಾರ ಮಾಡಿದೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪಿಎಸ್‌ಐ ಪರಶುರಾಮ್ ಅವರ ಪತ್ನಿಗೆ ಸರ್ಕಾರದ ಉದ್ಯೋಗ ನೀಡುತ್ತೇವೆ. ಜತೆಗೆ ಪರಿಹಾರವನ್ನೂ ಕೊಡುತ್ತೇವೆ ಎಂದರು.
ಪಿಎಸ್‌ಐ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ ಇದು ಆತ್ಮಹತ್ಯೆ ಅಲ್ಲ ಎಂದು ಇಲಾಖೆ ಹೇಳಿದೆ.ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ಕಾರಣ ಗೊತ್ತಾಗುತ್ತೆ ಎಂದರು.
ಪಿಎಸ್‌ಐ ಪರಶುರಾಮ್ ಅವರ ಪತ್ನಿ ಸ್ಥಳೀಯ ಶಾಸಕರ ಮೇಲೆ ಆರೋಪ ಮಾಡಿದ್ದಾರೆ. ಇದನ್ನೂ ಗಮನದಲ್ಲಿಟ್ಟುಕೊಂಡು ಸಿಐಡಿ ತನಿಖೆ ನಡೆಯಲಿದೆ ಎಂದರು.
ಮುಂದಿನ ೧೦ ತಿಂಗಳ ಒಳಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತೆ ಎಂಬ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ಮುಖಂಡರುಗಳು ಈ ರೀತಿ ಮಾತನಾಡುವುದು ಸಹಜ. ಸರ್ಕಾರ ಅಸ್ಥಿರವಾಗುವಂತಹ ಪರಿಸ್ಥಿತಿ ಇಲ್ಲ, ಅಂತಹ ಸೂಚನೆಗಳೂ ಕಾಣುತ್ತಿಲ್ಲ ಎಂದರು.
ಪತ್ನಿಗೆ ಸರ್ಕಾರಿ ನೌಕರಿ
ಯಾದಗಿರ್‌ನ ಮೃತ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪರಶುರಾಂ ಪತ್ನಿಗೆ ಸರ್ಕಾರಿ ಉದ್ಯೋಗದ ಜತೆಗೆ ಪರಿಹಾರವನ್ನೂ ನೀಡಲು ಸರ್ಕಾರ ನಿರ್ಧಾರ ಮಾಡಿದೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅಮಿತ್‌ಶಾ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪಿಎಸ್‌ಐ ಪರಶುರಾಮ್ ಅವರ ಪತ್ನಿಗೆ ಸರ್ಕಾರದ ಉದ್ಯೋಗ ನೀಡುತ್ತೇವೆ. ಜತೆಗೆ ಪರಿಹಾರವನ್ನೂ ಕೊಡುತ್ತೇವೆ ಎಂದರು.