ಸೆಮಿಫೈನಲ್ ಗೆ ಭಾರತ ಪುರುಷರ ಹಾಕಿ ತಂಡ
ಪ್ಯಾರಿಸ್.ಆ.4- ಭಾರತ ಪುರುಷರ ಹಾಕಿ ತಂಡ ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ. ಸೆಮಿಫೈನಲ್ ನಲ್ಲಿ ಅರ್ಜೆಂಟಿನಾ ಅಥವಾ ಜರ್ಮನಿ ತಂಡವನ್ನು ಎದುರಿಸಲಿದೆ. ಒಲಿಂಪಿಕ್ಸ್ ನಲ್ಲಿ ಭಾರತ ಸತತ ಎರಡನೆ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಭಾರತದ ಗೋಡೆ ಎಂದೇ ಖ್ಯಾತರಾಗಿರುವ ಗೋಲ್ ಕೀಪರ್ ಶೃಜೇಶ್ ರೋಚಕ ಪೆನಾಲ್ಟಿ ಶೂಟೌಟ್ ನಲ್ಲಿ ಹೀರೊ ಆಗಿ ಮೆರೆದರು. ಭಾರತ ಪೆನಾಲ್ಟಿ ಶೂಟೌಟ್ ನಲ್ಲಿ 4-2 ಗೋಲುಗಳ ರೋಚಕ ಗೆಲುವು ಪಡೆಯಿತು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಭಾರತ ಮತ್ತು ಗ್ರೇಟ್ ಬ್ರಿಟನ್ 1-1 ಸಮಗೊಳಿಸಿದವು.
ಅಮಿತ್ ರೋಹಿದಾಸ್ ರೆಡ್ ಕಾರ್ಡ್ ಪಡೆದಿದ್ದರಿಂದ ಭಾರತ ಮೂರು ಕ್ವಾರ್ಟರ್ ನಲ್ಲಿ 10 ಆಟಗಾರರೊಂದಿಗೆ ಆಡಿತು.
ಫಿಲೀಪ್ ರೋಪರ್ ಹೊಡೆದ ಚೆಂಡನ್ನ ಶೃಜೇಶ್ ಅದ್ಭುತವಾಗಿ ಹಿಡಿದರು. ರಾಜ್ ಕುಮಾರ್ ಪಾಲ್ ಗೋಲು ಹೊಡೆದು ತಂಡವನ್ನು ಉಪಾಂತ್ಯಕ್ಕೆ ಅರ್ಹತೆ ಪಡೆಯುವಂತೆ ಮಾಡಿದರು.
ನಾಯಕನ ಆಟವಾಡಿದ ಹರ್ಮನ್ ಪ್ರೀತ್ 22ನೇ ನಿಮಿಷದಲ್ಲಿ ಗೋಲು ಹೊಡೆದರು. 27ನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್ ನ ಲೀ ಮೊರ್ಟನ್ ಗೋಲು ಹೊಡೆದು 1-1 ಸಮಗೊಳಿಸಿದರು. ನಂತರ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಗೋಲು ಹೊಡೆಯಲು ಸಾಧ್ಯವಾಗಲಿಲ್ಲ. ಮೂರನೆ ಕ್ವಾರ್ಟರ್ ನಲ್ಲಿ ಶೃಜೇಶ್ ಚಾಣಾಕ್ಷತನದಿಂದ ಚೆಂಡನ್ನ ತಡೆದರು.
ಶೂಟೌಟ್ ನ್ಲಲ್ಲಿ ಅಲ್ಬರ್ಟಿ ಮೊದಲ ಗೋಲು ಹೊಡೆದರು. ನಾಯಕ ಹರ್ಮನ್ ಪ್ರೀತ್ ಗೋಲು ಹೊಡೆದು 1-1 ಸಮಗೊಳಿಸಿದರು. ವಾಲ್ಲೇಸ್ ಎರಡನೆ ಗೋಲು ಹೊಡೆದರು. ಭಾರತ ಪರ ಸುಖ್ಜಿತ್ 2-2 ಗೋಲು ಹೊಡೆದು ಸಮಗೊಳಿಸಿದರು. ಗ್ರೇಟ್ ಬ್ರಿಟನ್ ಪರ ವಿಲಯಮ್ಸನ್ ಗೋಲ್ಲಾಗಿಸುವಲ್ಲಿ ವಿಫಲರಾದರು. ಭಾರತದ ಲಲಿತ್ ಉಪಾಧ್ಯಾಯ್ ಗೋಲು ಹೊಡೆದು ಮುನ್ನಡೆ ನೀಡಿದರು. ಶೃಜೇಶ್ ರೋಪರ್ ಹೊಡೆದ ಚೆಂಡನ್ನ ತಡೆದರು. ರಾಜ್ ಕುಮಾರ್ ಗೋಲು ಹೊಡೆದು ಭಾರತವನ್ನು ಸಂಭ್ರಮಿಸುವಂತೆ ಮಾಡಿದರು.