ಬೆದರಿಕೆಗೆ ಜಗ್ಗಲ್ಲ: ಸಿಎಂ ರಾಜೀನಾಮೆಗೆ ಬಿವೈವಿ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೪:ಬಿಜೆಪಿ-ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆ ನೋಡಿ ಆಡಳಿತ ಪಕ್ಷವಾದ ಕಾಂಗ್ರೆಸ್ ಗಾಬರಿಯಾಗಿದೆ. ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ನಮಗೇ ಹಗರಣಗಳನ್ನು ಬಿಚ್ಚಿಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆಲ್ಲ ನಾವು ಜಗ್ಗಲ್ಲ, ಮುಖ್ಯಮಂತ್ರಿಗಳು ರಾಜೀನಾಮೆವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಮೈಸೂರು ಚಲೋ ಪಾದಯಾತ್ರೆಯ ೨ನೇ ದಿನವಾದ ಇಂದು ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ವಿರೋಧ ಪಕ್ಷ, ರಾಜ್ಯದ ಪರವಾಗಿನಾವು ಕೇಳುವ ಪ್ರಶ್ನೆಗಳಿಗೆ ಸಿಎಂ-ಡಿಸಿಎಂ ಉತ್ತರ ನೀಡಬೇಕು ಅದರ ಬದಲಾಗಿ ನಮಗೇ ಪ್ರಶ್ನೆಹಾಕುತ್ತಿರುವುದು ಹಾಸ್ಯಸ್ಪದ ಎಂದು ಟೀಕಿಸಿದರು.
ಈ ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಮತ್ತು ಬುದ್ಧಿ ಕಲಿಸುವ ಪ್ರಯತ್ನ ಮಾಡುತ್ತೇವೆ ಎಂದ ಅವರು, ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಹೆಳಿಕೊಂಡು ಅಧಿಕಾರಿಕ್ಕೆ ಬಂದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಟೀಕಿಸಿದರು.
ಈ ಪಾದಯಾತ್ರೆ ಮುಗಿಯುವುದರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವರೇ ಎಂಬ ಪ್ರಶ್ನೆಗೆ ನನಗೇನು ಇದರಲ್ಲಿ ಅನುಮಾನವಿಲ್ಲ. ಅವರು ರಾಜೀನಾಮೆ ನೀಡುವ ದಿನಗಳು ಹತ್ತಿರವಾಗಿದೆ ಎಂದರು.
ಈ ಸರ್ಕಾರ ಹಗರಣದ ಕೂಪವಾಗಿದೆ. ಎಲ್ಲರೂ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಯಾದಗಿರ್‌ನ ಪಿಎಸ್‌ಐ ಪರಶುರಾಮ್ ಕಾಂಗ್ರೆಸ್ ಶಾಸಕರ ಹuದ ಬೇಡಿಕೆ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
ಗಾಂಧಿ ಕುಟುಂಬಕ್ಕೆ ಕಪ್ಪ ಕಾಣಿಕೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಣವನ್ನು ಲೂಟಿ ಮಾಡಿ ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ಕಪ್ಪಕಾಣಿಕೆ ಸಲ್ಲಿಸುತ್ತಿದೆ ಎಂದು ಹರಿಹಾಯ್ದರು.
ಪರಿಶಿಷ್ಟ ಜಾತಿ ವರ್ಗದ ಹಣವನ್ನು ಲೂಟಿ ಮಾಡುವ ಕೆಲಸ ನಡೆದಿದೆ. vರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಡದಿಯಲ್ಲಿರುವ ಟಯೊಟಾ ಕಾರ್ಖಾನೆ ಕೂಡ ಹೊರ ರಾಜ್ಯಕ್ಕೆ ಹೋಗುವ ಪರಿಸ್ಥಿತಿ ಉದಭವವಾಗಿದೆ ಹೊಸ ಉದ್ಯಮಗಳು ನಮ್ಮ ರಾಜ್ಯಕ್ಕೆ ಬರುತ್ತಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಸರ್ಕಾರದ ದುರಾಂಕಾರದ ನಡತೆಯಿಂದ ಈ ರೀತಿ ಆಗುತ್ತಿದೆ ಎಂದು ದೂರಿದರು.
ಈ ಸಮಧರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಮಿ ಶಾಸಕರಾದ ಸುನಿಲ್‌ಕುಮಾರ್ ಸತೀಶ್ ರೆಡ್ಡಿ ಡಾ. ಸಿಎನ್ ಅಶ್ವತ್ಥನಾರಾಯಣ, ಗೋಪಾಲಯ್ಯ, ಕೃಷ್ಣಪ್ಪ, ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು ಸೇರಿದಂತೆ ಹಲು ಮುಖಂಡರು ಶಾಸಕರು ಉಪಸ್ಥಿತರಿದ್ದರು.