ಪೌಷ್ಟಿಕಾಂಶ ಸವಾಲಿಗೆ ಪರಿಹಾರ:ಮೋದಿ
ನವದೆಹಲಿ,ಆ,೩- ಜಾಗತಿಕ ಆಹಾರ ಮತ್ತು ಪೌಷ್ಠಿಕ ಭದ್ರತೆಗೆ ಪರಿಹಾರ ಕಂಡುಕೊಳ್ಳುವ ಭರವಸೆಯ ಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಜೊತೆಗೆ ಭಾರತ ಹಾಲು, ಮಸಾಲೆಗಳು ಮತ್ತು ಮಸೂರಗಳ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಭಾರತದ ಆಹಾರ ಭದ್ರತೆ ಜಾಗತಿಕ ಕಾಳಜಿಯಾಗಿದೆ. ದೇಶದಲ್ಲಿ “ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆ ಜೊತೆಗೆ ಪೌಷ್ಠಿಕಾಂಶ ದೊಡ್ಡ ಸವಾಲಾಗಿದ್ದು ಅದಕ್ಕೆ ಭಾರತದಲ್ಲಿ ಪರಿಹಾರವನ್ನೂ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
೩೨ನೇ ಅಂತಾರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರಜ್ಞರ ಸಂಘದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು
“೬೫ ವರ್ಷಗಳ ನಂತರ ಭಾರತದಲ್ಲಿ ಇಂತಹ ಸಮ್ಮೇಳನವನ್ನು ಆಯೋಜಿಸುತ್ತಿರುವುದಕ್ಕೆ ಸಂತೋಷವಾಗಿದೆ. ಭಾರತ ರಾಗಿ ಉತ್ಪಾದನೆಯಲ್ಲಿ ಅತಿದೊಡ್ಡ ಉತ್ಪಾದಕ ದೇಶವಾಗಿದೆ.ರಾಗಿಯನ್ನುಸೂಪರ್‍ಫುಡ್ ಎಂದು ಕರೆಯುತ್ತೇವೆ, ಜೊತೆಗೆ ಶ್ರೀಅನ್ನ ಎಂದು ಹೆಸರಿಸಿದ್ದೇವೆ ಕನಿಷ್ಠ ನೀರು ಮತ್ತು ಗರಿಷ್ಠ ಉತ್ಪಾದನೆಯ ತತ್ವದ ಆಧಾರದ ಮೇಲೆ, ಭಾರತದ ಸೂಪರ್ ಫುಡ್ ಜಾಗತಿಕ ಪೌಷ್ಠಿಕಾಂಶದ ಸಮಸ್ಯೆ ಪರಿಹರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ೧೨೦ ದಶಲಕ್ಷ ರೈತರು ಇದ್ದಾರೆ ಅದರಲ್ಲಿ ೩೦ ದಶಲಕ್ಷಕ್ಕಿಂತ ಹೆಚ್ಚು ಮಹಿಳಾ ರೈತರು ಮತ್ತು ಮೀನುಗಾರಿದ್ದಾರೆ
“ಭಾರತದಲ್ಲಿ ಇಂದಿಗೂ ಆರು ಋತುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತೇವೆ. ನಮಲ್ಲಿ ೧೫ ಕೃಷಿ ಹವಾಮಾನ ವಲಯಗಳಿವೆ ಎಂದಿದ್ಧಾರೆ,
“ಆಹಾರ ಮತ್ತು ಕೃಷಿಯ ಬಗ್ಗೆ ನಮ್ಮ ಸಂಪ್ರದಾಯಗಳು ಮತ್ತು ಅನುಭವಗಳು ದೇಶದಷ್ಟೇ ಪ್ರಾಚೀನವಾಗಿವೆ, ಭಾರತದ ಕೃಷಿ ಸಂಪ್ರದಾಯದಲ್ಲಿ ವಿಜ್ಞಾನ ಮತ್ತು ತರ್ಕಕ್ಕೆ ಆದ್ಯತೆ ನೀಡಲಾಗಿದೆ.ಭಾರತೀಯ ಸಮಾಜದಲ್ಲಿ ಔಷಧೀಯ ಪರಿಣಾಮಗಳಿರುವ ಆಯುರ್ವೇದ ವಿಜ್ಞಾನವಿದೆ.ಸುಮಾರು ೨೦೦೦ ವರ್ಷಗಳ ಹಿಂದೆ, ’ಕೃಷಿ ಪರಾಶರ’ ಎಂಬ ಗ್ರಂಥ ಬರೆಯಲಾಗಿದೆ, ಇದು ಮಾನವ ಇತಿಹಾಸಕ್ಕೆ ಒಂದು ಪರಂಪರೆಯಾಗಿದೆ ಎಂದಿದ್ದಾರೆ.
“ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರೈತರನ್ನು ಬೆಳೆಸಲು ಮತ್ತು ಅವರನ್ನು ಮುಖ್ಯವಾಹಿನಿಗೆ ಕರೆದೊಯ್ದ ರೈತ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್, ಅವರ ಪ್ರತಿಮೆ – ಸ್ಟ್ಯಾಚ್ಯೂ ಆಫ್ ಲಿಬರ್ಟಿಗಿಂತ ಎರಡು ಪಟ್ಟು ಎತ್ತರದ ಏಕತಾ ಪ್ರತಿಮೆ ನಿರ್ಮಿಸಲಾಗಿದೆ. ದೇಶದ ೬ ಲಕ್ಷ ಹಳ್ಳಿಗಳಿಂದ ರೈತರು ಬಳಸುತ್ತಿದ್ದ ಕಬ್ಬಿಣದ ಉಪಕರಣಗಳ ಭಾಗಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ ’ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೃಷಿ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ದರ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಉತ್ಪಾದನೆಯು ಅತ್ಯಗತ್ಯ. ಹೆಚ್ಚಳ, ಭಾರತ ಯಾವಾಗಲೂ ಸುರಕ್ಷಿತ ಉತ್ಪಾದನೆಯ ಬಗ್ಗೆ ಕಾಳಜಿ ವಹಿಸುತ್ತದೆ. ಮಾನವ ದೇಹಕ್ಕೆ ಮತ್ತು ಭೂಮಿ ಮತ್ತು ಮಣ್ಣಿನ ಆರೋಗ್ಯಕ್ಕಾಗಿ… ಭಾರತವು ಸಾವಯವ ಕೃಷಿಗೆ ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ