ಗೋಡೆ ಕುಸಿದು 9 ಮಕ್ಕಳ ಸಾವು
ಭೂಪಾಲ್(ಮಧ್ಯಪ್ರದೇಶ),ಆ.೪:ಸಾಗರ್ ಜಿಲ್ಲೆಯ ಶಹಪುರದಲ್ಲಿ ಗೋಡೆ ಕುಸಿದ ಪರಿಣಾಮ ೯ ಮಕ್ಕಳು ಸಾವನ್ನಪ್ಪಿದ್ದು, ೬ ಮಂದಿ ಗಾಯಗೊಂಡು ಸಾಗರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ೫೦ ವರ್ಷದ ಹಳೆಯದಾದ ಮನೆ ಗೋಡೆ ಕುಸಿದ ಹಿನ್ನೆಲೆಯಲ್ಲಿ ೯ ಮಕ್ಕಳು ಸಾವನ್ನಪ್ಪಿದ್ದಾರೆ. ಉಳಿದಂತೆ ೬ ಮಂದಿ ಗಾಯಗೊಂಡಿದ್ದಾರೆ. ಶಾಜಾಪುರದ ಹರ್‍ದೌಲ್ ದೇವಸ್ಥಾನದಲ್ಲಿ ಪಾರ್ಥೀವ್ ಶಿವಲಿಂಗ ನಿರ್ಮಾಣ ವೇಳೆ ಈ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದೇವಸ್ಥಾನದ ಆವರಣದ ಪಕ್ಕದ ಮನೆಯ ಗೋಡೆ ಏಕಾಏಕಿ ಕುಸಿದಿದೆ.ಅವಶೇಷಗಳಡಿ ಮಕ್ಕಳು ಸಿಲುಕಿ ಸಾವನ್ನಪ್ಪಿದ್ದಾರೆ.
ಮೃತ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಮೋಹನ್‌ಯಾಧವ್ ೪ ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾಗೂ ಮಕ್ಕಳ ಸಾವಿನ ಕುರಿತು ಸಂತಾಪ ಮತ್ತು ಬೇಸರ ವ್ಯಕ್ತಪಡಿಸಿ ಗಾಯಗೊಂಡವರಿಗೆ ಸೂಕ್ತ ರೀತಿ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಉಳಿದಂತೆ ಜೀಪ್ ಮತ್ತು ಟ್ರಕ್ ಡಿಕ್ಕಿಯಾಗಿ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.