ತಾಕತ್ತಿದ್ದರೆ ಬಿವೈವಿ ಭ್ರಷ್ಟಾಚಾರ ಬಯಲಿಗೆಳಯಲಿ: ಸಿಎಂ, ಡಿಕೆಶಿಗೆ ಯತ್ನಾಳ್ ಸವಾಲು
ವಿಜಯಪುರ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಧಮ್‌, ತಾಕತ್‌ ಇದ್ರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು ಹಾಕಿದರು.
ಒಂದೆಡೆ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ವಿರುದ್ಧ ಹೋರಾಟ. ನಡೆಸುತ್ತಿದ್ದರೆ ಸ್ವಪಕ್ಷೀಯದವರೆ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಬಹಿರಂಗ ಹೇಳಿಕೆ ‌ನೀಡುವ ಮೂಲಕ ಪೇಚಿಗೆ ಸಿಲುಕಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಕೊರೊನಾ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರ ಹೊರಗೆ ಬರಲಿ. ಭ್ರಷ್ಟಾಚಾರ ಮಾಡಿದವರು ಭ್ರಷ್ಟಾಚಾರ ವಿರುದ್ಧ ಮಾಡುತ್ತಿರುವ ಹೋರಾಟಕ್ಕೆ ಬೆಂಬಲ‌ ಇಲ್ಲ ಎಂದು ಬಿಜೆಪಿ ಪಾದಯಾತ್ರೆಗೆ ತಿರುಗೇಟು ನೀಡಿದರು.
ಡಿಕೆಶಿ-ವಿಜಯೇಂದ್ರ ನಡುವೆ ಹೊಂದಾಣಿಕೆ ಇದೆ. ಈ‌ ಹೊಂದಾಣಿಕೆ ನೂರರಷ್ಟು ನಿಜ. ಭೋವಿ, ತಾಂಡಾ ನಿಗಮಗಳ ತನಿಖೆ ಆಗಲಿ. ಭ್ರಷ್ಟ ಕುಟುಂಬವನ್ನ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಡಿ. ಸಿದ್ದರಾಮಯ್ಯ ರ ಡಿಕೆಶಿಗೆ ಧಮ್, ತಾಕತ್‌ ಇದ್ದರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ ಸವಾಲು ಹಾಕಿದರು.
ವಿಜಯೇಂದ್ರ ಹಾಗೂ ಡಿಕೆಶಿ ಇಬ್ಬರೂ ಭ್ರಷ್ಟರು. ಇಬ್ಬರು ಸೇರಿಯೇ ಬಿಜಿನೆಸ್ ಮಾಡ್ತಿದ್ದಾರೆ. ಯಡಿಯೂರಪ್ಪ ಸಹ ಯಾವುದೇ ಪಕ್ಷದ ವೇದಿಕೆಗೆ ಬರಬಾರದು. ಯಡಿಯೂರಪ್ಪ ಮೇಲೆ ಗಂಭೀರ ಆರೋಪಗಳಿವೆ. ಅವರು ವೇದಿಕೆಗೆ ಬರಲೇಬಾರದು ಎಂದು ಕಿಡಿಕಾರಿದರು.