ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಅಭ್ಯರ್ಥಿ
ವಾಷಿಂಗ್ಟನ್, ಆ.೩- ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಇದ್ದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಲಾಗಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಅಧಿಕೃತ ಅಭ್ಯರ್ಥಿಯಾಗುವ ಮೂಲಕ ಮೊದಲ ಕಪ್ಪು ವರ್ಣೀಯ ಹಾಗು ಏಷ್ಯಾದ ಮೊದಲ ವ್ಯಕ್ತಿ ಎನ್ನುವ ಹಿರಿಮೆಗೆ ಕಮಲಾ ಹ್ಯಾರೀಸ್ ಪಾತ್ರವಾಗಿದ್ದಾರೆ.
ನವೆಂಬರ್ ೫ ರಂದು ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚುನಾವಣೆಯಲ್ಲಿ ಮುಖಾಮುಖಿಯಾಗಲಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿದರೆ ಕಮಲಾ ಹ್ಯಾರಿಸ್ ಅವರು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾದ ಇತಿಹಾಸ ನಿರ್ಮಾಣ ಮಾಡಲಿದ್ದಾರೆ.
ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರು ಕಳೆದ ತಿಂಗಳು ಅಧ್ಯಕ್ಷೀಯ ಸ್ಥಾನದ ಚುನಾವಣಾ ಕಣದಿಂದ ಹಿಂದೆ ಸರಿದ ನಂತರ ಡೆಮಾಕ್ರಟಿಕ್ ಪಕ್ಷದ ಅವಿರೋಧವಾಗಿ ತನ್ನ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದೆ.
ಅಮೆರಿಕಾದ ಅಧ್ತಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ನಾಮನಿರ್ದೇಶನ ಗಳಿಸಲು ಅಗತ್ಯವಾದ ಮಿತಿಯಾದ ೨,೩೫೦ ಪ್ರತಿನಿಧಿಗಳ ಬೆಂಬಲಕ್ಕೂ ಹೆಚ್ಚು ಮತ ಪಡೆದುಕೊಂಡ ನಂತರ ಕಮಲಾ ಹ್ಯಾರಿಸ್ ಅವರನ್ನು ಔಪಚಾರಿಕವಾಗಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಮಲಾ ಹ್ಯಾರೀಸ್ ಅಮೆರಿಕವನ್ನು ಮತ್ತಷ್ಡು ಅಭಿವೃದ್ಧಿ ಮಾಡುವ ಭರವಸೆ ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದ ಪಕ್ಷದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದಾರೆ.
ಅಧ್ಯಕ್ಷೀಯ ನಾಮಿನಿಯನ್ನು ಆಯ್ಕೆಮಾಡುವ ಪ್ರಕ್ರಿಯೆಯಲ್ಲಿ ಡೆಮಾಕ್ರಟಿಕ್ ಪಕ್ಷದ ೩,೯೨೩ ಪ್ರತಿನಿಧಿಗಳು ಭಾಗಿಯಾಗಿದ್ದರು ಅದಲ್ಲಿ ಕಮಲಾ ಹ್ಯಾರೀಸ್ ಅವರಿಗೆ ಶೇಕಡಾ ೯೯ ರಷ್ಡು ಮತಗಳು ಚಲಾವಣೆಯಾಗಿವೆ.