ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ತೆರಳಲಿರುವ ಶುಭಾಂಶು
ಬೆಂಗಳೂರು,ಆ.೩- ಗಗನಯಾನ ಮಿಷನ್‌ನ ಭಾಗವಾಗಿ ಅಮೇರಿಕಾದೊಂದಿಗೆ ಭಾರತೀಯ ಗಗನಯಾತ್ರಿ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲು ಇಸ್ರೋ ನಿರ್ದರಿಸಿದೆ. ಭಾರತೀಯ ಗಗನಯಾತ್ರಿಗಳಾದ ಶುಭಾಂಶು ಶುಕ್ಲಾ ಮತ್ತು ಪ್ರಶಾಂತ್ ನಾಯರ್ ಅವರು ಆಗಸ್ಟ್ ೨೦೨೪ ರ ಮೊದಲ ವಾರದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಾಟದ ತರಬೇತಿ ಪ್ರಾರಂಭಿಸಲಿದ್ದಾರೆ. ಅವರಲ್ಲಿ ಶುಕ್ಲಾ ಅವರನ್ನು ಕಳುಹಿಸಲು ನಿರ್ಧರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಈ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಬಾಹ್ಯಾಕಾಶ ಹಾರಾಟದ ಒಪ್ಪಂದದ ಭಾಗವಾಗಿ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರನ್ನು ಕಳುಹಿಸಲು ಸಜ್ಜಾಗಿದೆ.ಇಸ್ರೋದ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರ, ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರನ್ನು ಪ್ರಧಾನ ಮಿಷನ್ ಪೈಲಟ್ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್ ಅವರನ್ನು ಬ್ಯಾಕಪ್ ಮಾಡಲು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆಬಹುಪಕ್ಷೀಯ ಸಿಬ್ಬಂದಿ ಕಾರ್ಯಾಚರಣೆಗಳ ಫಲಕದಿಂದ ಅಂತಿಮ ಅನುಮೋದನೆ ನೀಡಲಾಗುತ್ತದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತದ ಗಗನ್‌ಯಾನ್ ಮಿಷನ್‌ಗೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳಲ್ಲಿ ಶುಕ್ಲಾ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ನಾಯರ್ ಸೇರಿದ್ದಾರೆ.
ಶುಕ್ಲಾ ಮತ್ತು ನಾಯರ್ ಈ ತಿಂಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಹಾರಾಟದ ತರಬೇತಿಯನ್ನು ಪ್ರಾರಂಭಿಸುತ್ತಾರೆ:”ಐಎಸ್‌ಎಸ್‌ನಲ್ಲಿರುವ ಸಮಯದಲ್ಲಿ, ಗಗನಯಾತ್ರಿಗಳು ಒಬ್ಬ ಭಾರತೀಯ ಸೇರಿದಂತೆ) ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ-ವಿಜ್ಞಾನದ ಪ್ರದರ್ಶನ ನಡೆಸಲಿದ್ದಾರೆ ಎಂದು ಇಸ್ರೋ ತಿಳಿಸಿದೆ.