ಕೃಷ್ಣ ನದಿಯಲ್ಲಿ ಪ್ರವಾಹ ಭೀತಿ
ಚಿಕ್ಕೋಡಿ, ಆ.೨- ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ ಇಂದು ಬೆಳಿಗ್ಗೆ ೯:೦೦ ಗಂಟೆಗೆ ಮತ್ತೆ ೫೦ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.
ಕೊಯ್ನ್ ಜಲಾಶಯದಿಂದ ೬ ಗೆಟ್ ಗಳಿಂದ ನೀರು ಬಿಡುಗಡೆ ಮಾಡಲಾಗಿದ್ದು ನದಿ ನೀರಿನ ಒಳಹರಿವು ಹೆಚ್ಚಾಗಲಿದೆ. ಈಗಾಗಲೆ, ಒಟ್ಟು ೧೦೫ ಟಿ ಎಮ್ ಸಿ ಸಾಮರ್ಥ್ಯ ವಿರುವ ಕೊಯ್ನ್ ಜಲಾಶಯ ೮೫ ಟಿ ಎಮ್ ಸಿ ಯಷ್ಟು ಭರ್ತಿಯಾಗಿದೆ.ಇತ್ತ ದೂದಗಂಗಾ, ವೇದಗಂಗಾ, ಪಂಚಾಗಂಗಾ ನದಿಗಳು ಒಳಹರಿವು ಹೆಚ್ಚಾಗಿದ್ದು ನದಿ ತೀರದ ಜನರಿಗೆ ಮತ್ತೆ ಪ್ರವಾಹ ಆತಂಕ ಹೆಚ್ಚಾಗಿದೆ.