ಒಂದು ವಾರ ಮುಂಚೆ‌ ಭೂಕುಸಿತದ ಎಚ್ಚರಿಕೆ ನೀಡಿತ್ತು: ರಾಜ್ಯಸಭೆಯಲ್ಲಿ ಶಾ ಹೇಳಿಕೆ
ನವದೆಹಲಿ, ಜು.31- ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡಿನಲ್ಲಿ ಒಂದು ವಾರದ ಮೊದಲು ಭೂಕುಸಿತ ಸಂಭವಿಸಲಿದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು ಎಂದು ಗೃಹಸಚಿವ ಅಮಿತ್ ಶಾ ತಿಳಿಸಿದರು.
ಹೇಳಿದರು.
ಭಾರೀ ಮಳೆಯಾಗುವ ಮುನ್ಸೂಚನೆಯ ನಂತರ ಕೇಂದ್ರವು ಒಂಬತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಿದೆ ಎಂದು ಅವರು‌ ರಾಜ್ಯಸಭೆಯ ಲ್ಲಿಂದು ತಿಳಿಸಿದರು.
ಭೀಕರ ದುರ್ಘಟನೆ ಬಗ್ಗೆ ಸಂತಾಪ ಸೂಚಿಸಿದ ಕೇಂದ್ರ ಗೃಹಸಚಿವ ಅಮಿತ್‌ ಶಾ ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದರು.
ಜುಲೈ 23 ರಂದು ಕೇಂದ್ರ ಸರ್ಕಾರವು ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿತ್ತು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ಜುಲೈ 24 ಮತ್ತು 25 ರಂದು ಮತ್ತೆ ಮುನ್ನೆಚ್ಚರಿಕೆ ನೀಡಲಾಯಿತು. ಜುಲೈ 26ರಂದು 20 ಸೆಂ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಭೂಕುಸಿತ ಸಂಭವಿಸಿ ಜನ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರದ ಮುನ್ನೆಚ್ಚರಿಕಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸರ್ಕಾರವು ಈಗಾಗಲೇ 2000ಕೋಟಿ ರೂ ಮೀಸಲಿಟ್ಟಿದೆ ಎಂದು ಶಾ ವಿವರಿಸಿದರು.