ಗಾಯಕ್ವಾಡ್ ನಿಧನಕ್ಕೆ ಮೋದಿ ಸೇರಿ ಗಣ್ಯರ ಸಂತಾಪ
ನವದೆಹಲಿ.ಆ.೧- ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನ್ಶುಮಾನ್ ಗಾಯಕ್ವಾಡ್ ನಿಧನಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ ಮತ್ತು ಭಾರತ ಕ್ರಿಕೆಟ್ ಸಂತಾಪ ಸೂಚಿಸಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭಾರತ ತಂಡದ ಮಾಜಿ ಕೋಚ್ ಕೂಡ ಆಗಿದ್ದ ಅನ್ಶುಮಾನ್ ಗಾಯಕ್ವಾಡ್ ನಿನ್ನೆ ಬರೋಡಾದಲ್ಲಿ ನಿಧನರಾದರು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟರ್‌ನಲ್ಲಿ, ಅನ್ಶುಮಾನ್ ಗಾಯಕ್ವಾಡ್ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಸದಾ ನೆನಪಿನಲ್ಲಿರುತ್ತದೆ. ಭಾರತ ಕ್ರಿಕೆಟ್‌ಗೆ ಅವರೊಂದು ವರ ಮತ್ತು ಅತ್ಯುತ್ತಮ ಕೋಚ್ ಆಗಿದ್ದರು. ಅವರ ನಿಧನ ಅತೀವ ನೋವು ನೀಡಿದೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್‌ನ ಹೆಮ್ಮೆಯನ್ನು ಹೆಚ್ಚಿಸಿದ ಕ್ರಿಕೆಟ್ ಕೌಶಲವನ್ನು ಹೆಚ್ಚಿಸಿದ ದಿಗ್ಗಜ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪವಿದೆ. ಓಂ ಶಾಂತಿ ಎಂದು ಕೇಂದ್ರ ಗೃಹ ಸಚಿವ ಅಮಿತ್? ಶಾ ಸಂತಾಪ ಸೂಚಿಸಿದ್ದಾರೆ.
ಮಾಜಿ ವೇಗಿ ಕನ್ನಡಿಗ ದೊಡ್ಡ ಗಣೇಶ್, ಅನ್ಶುಮಾನ್ ಗಾಯಕ್ವಾಡ್ ಓರ್ವ ಜಂಟಲ್‌ಮನ್ ಯುವ ಆmಗಾರರನ್ನು ಯಾವಗಲೂ ಪ್ರೋತ್ಸಾಹಿಸುತ್ತಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡಿ ಬಲಿಯಾಗಿದ್ದು ಬೇಸರ ತಂದಿದೆ.ಅವರ ಕುಟುಂಬಕ್ಕೆ ಸಂತಾಪಗಳು. ಆತ್ಮಕ್ಕೆ ಶಾಂತಿ ಸಿಗಲಿ. ಭಾರತ ಕ್ರಿಕೆಟ್ ನಿಮ್ಮನ್ನು ಯಾವತ್ತಿಗೂ ಮರೆಯುವದಿಲ್ಲ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.