ಮುಂಗಡ ಪತ್ರದಲ್ಲಿ ಎಲ್ಲಾ ರಾಜ್ಯಗಳಿಗೆ ಸಮಾನ ಅನುದಾನ: ನಿರ್ಮಲಾ ಸೀತಾರಾಮನ್
ನವದೆಹಲಿ,ಜು.30- 2024-25 ರ ಕೇಂದ್ರ ಮುಂಗಡ ಪತ್ರದಲ್ಲಿ ಎಲ್ಲಾ ರಾಜ್ಯಗಳಿಗೆ ಸಮಾನ ಅನುದಾನ ನೀಡಲಾಗಿದೆ. ವಿರೋದ ಪಕ್ಷಗಳು ಮಾಡುವ ಆರೋಪದಲ್ಲಿ ಹುರುಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ
ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ವರ್ಷಗಳ ಕಾಲ ಬಜೆಟ್ ನಲ್ಲಿ 17 ರಾಜ್ಯಗಳನ್ನು ಹೆಸರೇ ಉಲ್ಲೇಖಿಸಿರಲಿಲ್ಲ‌ ತಾವು ಮಾಡಿದ ತಪ್ಪನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಹೇಳಿದರು
ಲೋಕಸಭೆಯಲ್ಲಿ ಬಜೆಟ್ ಚರ್ಚೆಗೆ ಉತ್ತರಿಸಿದ ಅವರು ಮುಂಗಡಪತ್ರದಲ್ಲಿ ಹೆಸರು ಉಲ್ಲೇಖಿಲ್ಲ ಎಂದ ಮಾತ್ರ ಹಣ ನೀಡಿಲ್ಲ ಎಂದರ್ಥ ವಲ್ಲ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಅನುದಾನ ನೀಡಲಾಗಿದೆ ಎಂದಿದ್ದಾರೆ.
12.5 ಕೋಟಿ ಉದ್ಯೋಗ ಸೃಷ್ಟಿ:
ದೇಶದಲ್ಲಿ 2014 ಮತ್ತು 2023 12.5 ಕೋಟಿ ಉದ್ಯೋಗ ಸೃಷ್ಟಿಸಿದೆ ಎಂದು ಎಸ್ ಬಿಐ ಸಂಶೋಧನಾ ವರದಿ ಹೇಳಿದೆ.
ಯುಪಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಕೇವಲ 2.9 ಕೋಟಿಗೆ ಉದ್ಯೋಗ ಸೃಷ್ಟಿ ಆಗಿತ್ತು ಎಂದಿದ್ದಾರೆ
ನಿರುದ್ಯೋಗ ದರ 2017-18 ರಲ್ಲಿ ಶೇಕಡಾ 6 ರಿಂದ 2022-23 ರಲ್ಲಿ ಶೇಕಡಾ 3.2 ಕ್ಕೆ ಕಡಿಮೆಯಾಗಿದೆ 15 ರಿಂದ 29 ವರ್ಷ ವಯಸ್ಸಿನ ಯುವಕರ ನಿರುದ್ಯೋಗ 2017-18 ರಲ್ಲಿ ಶೇಕಡಾ 17.8 ರಿಂದ 2022 ರಲ್ಲಿ ಶೇಕಡಾ 10 ಕ್ಕೆ ತೀವ್ರವಾಗಿ ಕುಸಿದಿದೆ ಎಂದು ತಿಳಿಸಿದ್ದಾರೆ
ಕೃಷಿಗೆ ಐದು ಪಟ್ಟು ಅನುದಾನ;
ದೇಶದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ 2013-2014ರಲ್ಲಿ ಕೇವಲ 21,934 ಕೋಟಿ ರೂಪಾಯಿ ಒದಗಿಸಲಾಗಿತ್ರು. 2024-2025ರಲ್ಲಿ 1.23 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು ಈ ಪ್ರಮಾಣ ಐದು ಪಟ್ಟು ಹೆಚ್ಚಳವಾಗಿದೆ ಎಂದರಿ
ಪಿಎಂ ಕಿಸಾನ್ ಪ್ರಾರಂಭವಾದಾಗಿನಿಂದ 11 ಕೋಟಿಗೂ ಹೆಚ್ಚು ರೈತರಿಗೆ 3.2 ಲಕ್ಷ ಕೋಟಿ ರೂ.ಗಿಂತ ಹೆಚ್ಚು ವಿತರಿಸಲಾಗಿದೆ” ಎಂದು ಹೇಳಿದ್ದಾರೆ
ವಿಪಕ್ಷಗಳಿಗೆ ತಿರುಗೇಟು:
ವಿರೋದ ಪಕ್ಷಗಳು ಮೀಸಲಾತಿ ಮತ್ತು ಎಸ್‌ಸಿ ಮತ್ತು ಎಸ್‌ಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ, ಒಂದು ಮಾತಿದೆ – ‘ಚಾರಿಟಿ ಶುರುವಾಗುತ್ತದೆ ಮನೆಯಿಂದ’ ಅಂದರೆ ನೀವು ಇತರರಿಂದ ಏನು ಕೇಳುತ್ತೀರೋ ಅದನ್ನು ಮೊದಲು ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ.
ರಾಜೀವ್ ಗಾಂಧಿ ಫೌಂಡೇಶನ್‌ನಲ್ಲಿ ಎಷ್ಟು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಇದ್ದಾರೆ ಎಂದು ಕೇಳಲು ಬಯಸುತ್ತೇನೆ. ಒಂಬತ್ತು ಜನರಿದ್ದಾರೆ ಮತ್ತು ಅವರಲ್ಲಿ ಯಾರೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಕ್ಕೆ ಸೇರಿದವರಲ್ಲ, ”ಎಂದಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಆದ್ಯತೆ;
ಈ ವರ್ಷ ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಬಜೆಟ್‌ನಲ್ಲಿ 17,000 ಕೋಟಿ ರೂಪಾಯಿಗಳ ಆರ್ಥಿಕ ಬೆಂಬಲ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ವೆಚ್ಚಕ್ಕೆ 12,000 ಕೋಟಿ ರೂಪಾಯಿಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ
ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ
ಪರಿಶಿಷ್ಠರ ಹಣ ದುರುಪಯೋಗ:
ಕರ್ನಾಟಕದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 187ಕೋಟಿ ಹಗರಣ ಅಲ್ಲ 85 ಕೋಟಿ ರೂಪಾಯಿ ಎನ್ನುತ್ತಾರೆ ಎಂದು ಅವರು ಆರೋಪಿಸಿದರು.