ಇಸ್ರೇಲ್ ದಾಳಿ ಹ್ಯಾರಿಸ್ ಸಮರ್ಥನೆ
ವಾಷಿಂಗ್ಟನ್, ಜು.೩೧- ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ಕ್ರಮವನ್ನು ಅಮೇರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬೆಂಬಲಿಸಿದ್ದು ’ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ಗೆ ಇದೆ’ ಎಂದು ಹೇಳಿದ್ದಾರೆ
ಮುಂಬರುವ ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿರುವ ಅಮೇರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ದಕ್ಷಿಣ ಬೈರುತ್‌ನಲ್ಲಿ ವೈಮಾನಿಕ ದಾಳಿ ನಡೆಸಿದ ಇಸ್ರೇಲ್‌ನ ಕ್ರಮವನ್ನು ಬೆಂಬಲಿಸಿದ್ದಾರೆ.
ವಾಷಿಂಗ್ಟನ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಕಮಲಾ ಹ್ಯಾರಿಸ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕು ಸ್ವಾಗತಾರ್ಹ, ವಿಶೇಷವಾಗಿ ಭಯೋತ್ಪಾದಕ ಸಂಘಟನೆ ಹೆಜ್ಬೊಲ್ಲಾ ವಿರುದ್ಧ ನಡೆಸಿದ ಹೋರಾಟ ಸರಿಯಾಗಿಯೇ ಇದೆ ಎಂದಿದ್ದಾರೆ
ಭಯೋತ್ಪಾದಕ ಸಂಘಟನೆಯ ವಿರುದ್ಧ ದೇಶವನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಇಸ್ರೇಲ್ ಹೊಂದಿದೆ, ಇದರ ಭಾಗವಾಗಿ ಹಿಜ್ಬುಲ್ಲಾ ಸಂಘಟನೆಯ ಮೇಲೆ ದಾಳಿ ನಡೆದಿದೆ.. ಗೋಲನ್ ಹೈಟ್ಸ್‌ನಲ್ಲಿ ಇತ್ತೀಚೆಗೆ ನಡೆದ ರಾಕೆಟ್ ದಾಳಿಗೆ ಹೊಣೆಗಾರನೆಂದು ಹೇಳಲಾದ ಹೆಜ್ಬೊಲ್ಲಾ ಕಮಾಂಡರ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪ್ರತೀಕಾರ ತೆಗೆದುಕೊಂಡಿದೆ ಎಂದಿದ್ದಾರೆ.
ವಿವಾದಿತ ಪ್ರದೇಶದಲ್ಲಿ ನಡೆದ ದಾಳಿಯು ೧೨ ಮಕ್ಕಳ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಗಮನ ಸೆಳೆದಿತ್ತು ಮತ್ತು ಖಂಡನೆಗೆ ಕಾರಣವಾಗಿತ್ತು
ಬೈರುತ್‌ನ ದಕ್ಷಿಣ ಉಪನಗರ ಹೆಜ್ಬೊಲ್ಲಾದ ಭದ್ರಕೋಟೆಯಾಗಿದ್ದು ಅದರ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದೆ. ವೈದ್ಯಕೀಯ ಮತ್ತು ಭದ್ರತಾ ಮೂಲಗಳ ಪ್ರಕಾರ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಜ್ ಮೊಹ್ಸಿನ್ ಎಂದೂ ಕರೆಯಲ್ಪಡುವ ಶುಕ್ರ್, ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಹಿರಿಯ ಸಲಹೆಗಾರರಾಗಿದ್ದಾರೆ ಮತ್ತು ಗುಂಪಿನ ನಿಖರ ಕ್ಷಿಪಣಿ ಯೋಜನೆಯಲ್ಲಿ ಪ್ರಮುಖ ವ್ಯಕ್ತಿ ಎಂದು ನಂಬಲಾಗಿದೆ. ೧೯೮೩ ರಲ್ಲಿ ಬೈರುತ್‌ನಲ್ಲಿರುವ ಅಮೇರಿಕಾ ಮೆರೀನ್ ಬ್ಯಾರಕ್‌ಗಳ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಅಮೇರಿಕಾಕ್ಕೆ ಬೇಕಾಗಿದ್ದ ವ್ಯಕ್ತಿಯನ್ನು ಇಸ್ರೇಲ್ ಹೊಡೆದುರುಳಿಸಿದೆ.