ಕೌಟುಂಬಿಕ ಕಲಹ: ನದಿಗೆ ಹಾರಿದ ಪತ್ನಿ ಬದುಕಿಸಲು ಪತಿ ಹಾಗೂ ಸಹೋದರ ಸಂಬಂಧಿ ಭೀಮಾ ನದಿಗೆ ಜಿಗಿದು ನಾಪತ್ತೆ ಆಣೆಕಟ್ಟಿನ ಗೇಟ್ ಬಂದ್ ಮಾಡಿ ಕಾರ್ಯಾಚರಣೆ
ಅಫಜಲಪುರ : ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯು ತುಂಬಿ ಹರಿಯುತ್ತಿದ್ದ ದೇವಣಗಾಂವ ಸೇತುವೆ ಮೇಲಿಂದ ಸೊನ್ನ ಭೀಮಾ ನದಿಗೆ ಪತ್ನಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭದಲ್ಲಿ
ಅವಳ ರಕ್ಷಣೆಗೆ ಧಾವಿಸಿದ ಸಂದರ್ಭದಲ್ಲಿ ಗಂಡ ಹಾಗೂ ಸಹೋದರ ಸಂಬಂಧಿ ಸೋಮವಾರ ಸಂಜೆ 5.30 ರ ಸುಮಾರಿಗೆ ನದಿಯಲ್ಲಿ ನಾಪತ್ತೆಯಾಗಿದ್ದರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದ ನಿವಾಸಿಗಳಾದ ಲಕ್ಮೀ ಗಂ. ಶಿವಕುಮಾರ ಕಣ್ಣಿ ಇವರು ಸೇತುವೆ ಮೇಲಿಂದ ಭೀಮಾ‌ ನದಿಗೆ ಜಿಗಿದಾಗ ಅವರ ರಕ್ಷಣೆಗೆ ಗಂಡ ಶಿವಕುಮಾರ ಕಣ್ಣಿ (36) ರಾಜು ಅಂಕಲಗಿ (39) ನದಿಗೆ ಕೂಡಲೇ ಧಾವಿಸಿದ್ದಾರೆ. ನಂತರ ಮಹಿಳೆಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಖಾಸಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತಿ ಹಾಗೂ ಸಹೋದರ ಸಂಬಂಧಿ ನಾಪತ್ತೆ :
ಪತ್ನಿಯ ರಕ್ಷಣೆಗೆ ಧಾವಿಸಿದ ಪತಿ ಶಿವಕುಮಾರ ಕಣ್ಣಿ ಹಾಗೂ ಸಹೋದರ ಸಂಬಂಧಿ ರಾಜು ಅಂಕಲಗಿ ಈರ್ವರೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸಂಜೆವರೆಗೂ ರಕ್ಷಣಾ ಕಾರ್ಯಚರಣೆ ನಡೆಸಿದರೂ ಪತ್ತೆಯಾಗಿಲ್ಲ. ಹೀಗಾಗಿ ಬುಧವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಪ್ರಾರಂಭವಾಗಲಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಎಸ್ಓ ಅಶೋಕ ಜಮಾದಾರ, ಸಿಬ್ಬಂದಿಗಳಾದ ಪ್ರಕಾಶ ಮೇತ್ರೆ, ಶಿವಾನಂದ ಕುಂಬಾರ, ರಮೇಶ, ಗಜಾನಂದ, ಸುನೀಲ, ಸಿದ್ದಲಿಂಗ ಪತ್ತಾರ ಭಾಗಿಯಾಗಿದ್ದಾರೆ. ಸ್ಥಳಕ್ಕೆ ಅಫಜಲಪುರ ಪೋಲಿಸರು ಭೇಟಿ ನೀಡಿದ್ದು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕಲಬುರ್ಗಿ ಎಸ್ ಪಿ ಭೇಟಿ:
ಘಟನೆ ಹಿನ್ನೆಲೆ ಭೇಟಿ ನೀಡಿದ ಕಲಬುರ ಎಸ್ಪಿ ಅಡ್ಡೂರು ಶ್ರೀನಿವಾಸುಲು ರವರು ಘಟನೆ ಕುರಿತಂತೆ ಸಂಬಂಧಪಟ್ಟ ಕುಟುಂಬಸ್ಥರು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಇನ್ನುಳಿದವರ ಹುಡುಕಾಡಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐ ಸೋಮಲಿಂಗ ಒಡೆಯರ್ ಹಾಜರಿದ್ದರು. ಹಾಗೂ
ಅಫಜಲಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಅಶೋಕ ಜಮಾದಾರ, ಪ್ರಕಾಶ ಮೇತ್ರಿ, ಶಿವಾನಂದ ಕುಂಬಾರ, ರಮೇಶ ರೆಡ್ಡಿ, ಗಜಾನಂದ , ಸಿದ್ದಲಿಂಗ, ಸುನೀಲ ಕಾರ್ಯಾಚರಣೆ ನಡೆಸಿದರು.