ಪಾಕ್ ನಲ್ಲಿ ಒಂದೂವರೆ ಲಕ್ಷ ಉದ್ಯೋಗ ಕಡಿತ
ಇಸ್ಲಾಮಾಬಾದ್, ಸೆ.೩೦-ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಲು ಪಾಕಿಸ್ತಾನವು ತನ್ನ ದೇಶದಲ್ಲಿ ಸುಮಾರು ೧,೫೦,೦೦೦ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಮತ್ತು ಆರು ಸಚಿವಾಲಯ ರದ್ದು ಪಡಿಸುವುದಾಗಿ,ಎರಡು ಸಚಿವಾಲಯ ವಿಲೀನಗೊಳ್ಳಿಸುವುದಾಗಿ ಘೋಷಿಸಿದೆ.
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪಾಕಿಸ್ತಾನ ಹಲವಾರು ವರ್ಷಗಳಿಂದ ಹೆಣಗಾಡುತ್ತಿದೆ.ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಲ ಪಡೆಯಲು ಹಲವು ಮಾರ್ಗಗಳನ್ನು ಕಂಡುಕೊಂಡಿದೆ.
ಇತ್ತೀಚಿಗೆ ಏಳು ಶತಕೋಟಿ ಡಾಲರ್ ಸಾಲ ಒಪ್ಪಂದದ ಸಂದರ್ಭದಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡಿದೆ. ಇದರ ಭಾಗವಾಗಿ, ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಲು ದೇಶದಲ್ಲಿ ಸುಮಾರು ೧,೫೦,೦೦೦ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.ಅದೇ ರೀತಿ ಆರು ಸಚಿವಾಲಯಗಳು ರದ್ದಾಗಲಿದೆ. ಇನ್ನೆರಡು ವಿಲೀನವಾಗಲಿದೆ ಎನ್ನಲಾಗಿದೆ.
ಕಳೆದ ವರ್ಷ ಪಾಕಿಸ್ತಾನ ದಿವಾಳಿತನದ ಅಂಚಿಗೆ ಸಮೀಪವಾಗಿದ್ದರೂ, ಐಎಂಎಫ್‌ನಿಂದ ಮೂರು ಬಿಲಿಯನ್ ಡಾಲರ್‌ಗಳ ಸಾಲದಿಂದ ನೆರವಿನಿಂದ ಅದು ಹೊರಬಂದಿದೆ. ಇದು ದೀರ್ಘಾವಧಿ ಸಾಲಕ್ಕಾಗಿ ಐಎಂಎಫ್ ಹಲವು ಸುತ್ತಿನ ಸುದೀರ್ಘ ಮಾತುಕತೆ ನಡೆಸಿದೆ. ಐಎಂಎಫ್ ಅಂತಿಮವಾಗಿ ಸೆಪ್ಟೆಂಬರ್ ೨೬ ರಂದು ಸಹಾಯ ಪ್ಯಾಕೇಜ್ ನೀಡಲು ಒಪ್ಪಿಕೊಂಡಿದೆ.
ವೆಚ್ಚವನ್ನು ಕಡಿಮೆ ಮಾಡುವ ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸುವ, ಕೃಷಿ ಮತ್ತು ರಿಯಲ್ ಎಸ್ಟೇಟ್‌ನಂತಹ ಕ್ಷೇತ್ರಗಳ ಮೇಲಿನ ತೆರಿಗೆಗಳು ಮತ್ತು ಸಬ್ಸಿಡಿಗಳನ್ನು ಕಡಿಮೆ ಮಾಡುವ ಭರವಸೆಯೊಂದಿಗೆ ಪಾಕಿಸ್ತಾನಕ್ಕೆ ಮೊದಲ ಕಂತಾಗಿ ಒಂದು ಬಿಲಿಯನ್ ಡಾಲರ್‌ಗಳನ್ನು ಬಿಡುಗಡೆ ಮಾಡಿದೆ.