ಕಾರಿನಲ್ಲಿ ಪ್ರಯಾಗ್ ರಾಜ್ ರಾಣಿ ಶವ ಪತ್ತೆ
ಪ್ರಯಾಗರಾಜ್,ಸೆ.೨೯- ಪ್ರಯಾಗರಾಜ್‌ನ ಸ್ವರೂಪ್ ರಾಣಿ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯರ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ.ಕಾರ್ತಿಕೇಯ ಶ್ರೀವಾಸ್ತವ (೨೯) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕಿರಿಯ ವೈದ್ಯರು.ಶನಿವಾರ ರಾತ್ರಿ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಐಸಿಯುಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತಾದರೂ ಆದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾರಿನಲ್ಲಿ ಅರಿವಳಿಕೆಗೆ ಬಳಸುವ ಎರಡು ಇಂಜೆಕ್ಷನ್ ಬಾಟಲಿಗಳು ಮತ್ತು ಸಿರಿಂಜ್‌ಗಳು ಪತ್ತೆಯಾಗಿವೆ ಎನ್ನಲಾಗಿದೆ.ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಪ್ರಯಾಗರಾಜ್ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಉತ್ತರಾಖಂಡದ ಅಪ್ಪರ್ ಕಲಬಾರ್‌ನ ಕೋಟ್‌ದ್ವಾರ ನಿವಾಸಿ ಡಾ.ಕೃಷ್ಣ ಕುಮಾರ್ ಶ್ರೀವಾಸ್ತವ ಅವರ ಪುತ್ರ ಕಾರ್ತಿಕೇಯ ಅವರು ಎಸ್‌ಆರ್‌ಎನ್‌ನ ಮೂಳೆಚಿಕಿತ್ಸಾ ವಿಭಾಗದಲ್ಲಿ ಕಿರಿಯ ವೈದ್ಯರಾಗಿದ್ದಾರೆ.
ಕಾರ್ತಿಕೇಯ ಶ್ರೀವಾಸ್ತವ ಅವರು ಎಸ್‌ಆರ್‌ಎನ್ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಓದುತ್ತಿದ್ದರು. ಸ್ಟಾನ್ಲಿ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದರು. ಡಾ.ಕಾರ್ತಿಕೇಯ ಶ್ರೀವಾಸ್ತವ ಅವರು ಶನಿವಾರ ಬೆಳಗ್ಗೆ ೧೦ ಗಂಟೆಯಿಂದ ಕರ್ತವ್ಯದಲ್ಲಿದ್ದರು, ಡ್ಯೂಟಿ ಮುಗಿದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಲಾಗಿದೆ ಎಂದು ಪ್ರಯಾಗರಾಜ್ ಪೊಲೀಸರು ತಿಳಿಸಿದ್ದಾರೆ.