ವಿಮಾನ ಪತನ ಹಲವರ ಸಾವು
ವಾಷಿಂಗ್ಟನ್,ಸೆ.೨೯-ಅಮೆರಿಕಾದ ಉತ್ತರ ಕೆರೊಲಿನಾದ ಮಾಂಟಿಯೊದಲ್ಲಿರುವ ರೈಟ್ ಬ್ರದರ್ಸ್ ನ್ಯಾಷನಲ್ ಮೆಮೋರಿಯಲ್ಸ್ ಫಸ್ಟ್ ಫ್ಲೈಟ್ ಏರ್‌ಪೋರ್ಟ್‌ನಲ್ಲಿ ಸಿಂಗಲ್ ಇಂಜಿನ್ ವಿಮಾನವೊಂದು ಪತನಗೊಂಡು ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ನ್ಯಾಷನಲ್ ಪಾರ್ಕ್ ಸರ್ವೀಸ್ ಈ ಮಾಹಿತಿಯನ್ನು ನೀಡಿದೆ.ಸಾವಿನ ಸಂಖ್ಯೆಯ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.ಮುಂದಿನ ಸೂಚನೆ ಬರುವವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಪಾರ್ಕ್ ಸರ್ವೀಸ್ ತಿಳಿಸಿದೆ.
ಶನಿವಾರ ಸಂಜೆ ೫ ಗಂಟೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ಪಾರ್ಕ್ ಸರ್ವೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಶನಿವಾರ ಸಂಜೆ ೫ ಗಂಟೆಗೆ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಪಾರ್ಕ್ ಸರ್ವೀಸ್ ಬಿಡುಗಡೆ ಮಾಡಿದೆ. ಅಪಘಾತದ ನಂತರ ವಿಮಾನವು ಬೆಂಕಿಗೆ ಆಹುತಿಯಾಗಿದೆ. ಕಿಲ್ ಡೆವಿಲ್ ಹಿಲ್ಸ್ ಅಗ್ನಿಶಾಮಕ ಇಲಾಖೆ ಮತ್ತು ಇತರ ಸ್ಥಳೀಯ ಅಗ್ನಿಶಾಮಕ ಇಲಾಖೆಗಳು ಬೆಂಕಿಯನ್ನು ನಂದಿಸಿದವು ಎಂದು ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಘಟನೆಯ ಬಗ್ಗೆ ತನಿಖೆ ನಡೆಸಲಿದೆ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗೆ ಸಹ ಸೂಚಿಸಲಾಗಿದೆ ಎನ್ನಲಾಗಿದೆ.