ಎಚ್.ಡಿ.ಕೆ ಮೂಗಿನಲ್ಲಿ ದಿಡೀರ್ ರಕ್ತ ಸ್ರಾವ ; ಆಸ್ಪತ್ರೆಗೆ ದಾಖಲು
ಬೆಂಗಳೂರು: ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಮೂಗಿನಿಂದ ದಿಢೀರ್‌ ರಕ್ತಸ್ರಾವ ಉಂಟಾಗಿ ಆತಂಕ ಸೃಷ್ಟಿಯಾಗಿದ್ದು ತಕ್ಷಣವೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಸರು ಕೇಳಿಬಂದಿದ್ದರಿಂದ ಬೆಂಗಳೂರಿನಿಂದಮೈಸೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಇಂದು ಸಂಜೆ ಬಿಜೆಪಿ ಜೆಡಿಎಸ್ ನ ಸಮನ್ವಯ ಸಮಿತಿ ಸಭೆ ಖಾಸಗಿ ಹೋಟೆಲ್ ನಲ್ಲಿ ನಡೆದಿತ್ತು ಸಭೆ ಬಳಿಕ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮೂಗಿನಲ್ಲಿ ರಕ್ತ ಸೋರಿದೆ. ಸುದ್ದಿಗೋಷ್ಠಿ ವೇಳೆಯಲ್ಲೇ ದಿಢೀರ್ ಮೂಗಿನಲ್ಲಿ ರಕ್ತಸ್ರಾವವಾಗಿದೆ. ಇದರಿಂದ ಕೆಲ ಕಾಲ ಆತಂಕ ಸೃಷ್ಟಿಸಿದ್ದು, ಕೂಡಲೇ ಕುಮಾರಸ್ವಾಮಿ ಅವರನ್ನು ಪುತ್ರ ನಿಖಿಲ್ ಆಸ್ಪತ್ರಗೆ ಕರೆದೊಯ್ದಿದ್ದಾರೆ.
ದಿಢೀರ್ ಕುಮಾರಸ್ವಾಮಿ ಮೂಗಿನಲ್ಲಿ ರಕ್ತ ಸೋರಿದೆ. ಈ ರಕ್ತ ಸೋರುವುದನ್ನು ನೋಡಿ ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಗಾಬರಿಯಾಗಿದ್ದಾರೆ.
ಬಟ್ಟೆಯಿಂದ ಮೂಗನ್ನು ಎಚ್‌ಡಿಕೆ ಪದೇ ಪದೇ ಒರೆಸಿಕೊಂಡರು. ಅದರೂ ರಕ್ತ ಸೋರುವಿಕೆ ನಿಲ್ಲಲಿಲ್ಲ. ಮತ್ತೆ ಮೂಗಿನಿಂದ ರಕ್ತಸ್ರಾವ ಹೆಚ್ಚಾಗಿದ್ದು, ಬಿಳಿ ಶರ್ಟ್ ರಕ್ತಮಯವಾಗಿದೆ. ಇದನ್ನು ನೋಡಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು. ಕುಮಾರಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆಕುಮಾರಸ್ವಾಮಿಯವರ ಮೂಗಿನಲ್ಲಿ ರಕ್ತ ಸೋರಿಕೆ ಕಾರಣದ ಬಗ್ಗೆ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ. ‌‌‌‌‌ ‌ BOX. ಆರೋಗ್ಯ ಸ್ಥಿರವಾಗಿದೆ ನಿಖಿಲ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಗ್ಯ ಸ್ಥಿರವಾಗಿದೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ
ಅಪೋಲೋ ಆಸ್ಪತ್ರೆ ಬಳಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಜನ ಆತಂಕ ಪಡಬಾರದು.
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ 10-15 ದಿನಗಳ ನಿರಂತರ ಓಡಾಟ ರಾತ್ರಿ 1 ಗಂಟೆಯಾದ್ರೂ ವಿಶ್ರಾಂತಿ ಪಡೆದುಕೊಳ್ಳಲು ಆಗಿಲ್ಲ ಹಾಗಾಗಿ ಈ ರೀತಿಯಾಗಿದೆ ಇಂದು ರಾತ್ರಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಹೇಳಿದರು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮೂರನೇ ಸಲ ಹಾರ್ಟ್ ವಾಲ್ ಬದಲಿಸಲಾಗಿತ್ತು..
ನಾಳೆ ಬೆಳ್ಳಿಗ್ಗೆ ದೆಹಲಿಗೆ ತೆರಳುವರು ದೆಹಲಿಗೆ ತೆರಳುವ ಸಮಯದಲ್ಲಿ ಸ್ವಲ್ಪ ಬದಲಾವಣೆ ಆಗಬಹುದು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು
ಎಕೋ ಸೇರಿದಂತೆ ಎಲ್ಲಾ ಪರೀಕ್ಷೆ ನಡೆಸಲಾಗಿದೆ
ಕುಮಾರಸ್ವಾಮಿ ಅರೋಗ್ಯವಾಗಿ ಇದ್ದಾರೆ ಎಂದರು
ಕೇಂದ್ರದ ಸಚಿವರಾದ ಬಳಿಕ ೧೨ ಗಂಟೆವರೆಗೂ ಪುಸ್ತಕ ಓದತ್ತಾರೆ
ದೇಶಕ್ಕೆ ಏನಾದರೂ ಕೊಡಬೇಕು ಅಂತಾ ಕೆಲಸ ಮಾಡ್ತಾರೆ ಜನರ ಆರ್ಶೀವಾದದಿಂದ ಅರೋಗ್ಯವಾಗಿ ಇದ್ದಾರೆ ಎಂದು ಹೇಳಿದರು
ಜಯನಗರ ಆಪೋಲೋ ಆಸ್ಪತ್ರೆ ವೈದ್ಯ ಯತೀಶ್ ಹೇಳಿಕೆ..
ಕುಮಾರಸ್ವಾಮಿ ಅವರಿಗೆ ಮೂರು ಸಲ ಹೃದಯದ ಚಿಕಿತ್ಸೆ ನೀಡಲಾಗಿದೆ
ಬ್ಲಡ್ ಥಿನರ್ ಟ್ಯಾಬ್ಲೆಟ್ ತಗೆದುಕೊಳ್ಳತಾ ಇದ್ದರು
ಏನು ಆತಂಕಪಡುವ ಅಗತ್ಯ ಇಲ್ಲ
ರೋಟಿನ್ ಚೆಕಪ್ ಪರೀಕ್ಷೆ ಮಾಡಿದ್ದೇವೆ
ಆಡ್ಮಿಷನ್ ಆಗಿಲ್ಲ, ತಪಾಸಣೆ ಮುಗಿಸಿ ಹೊರಡುತ್ತಾರೆ ಎಂದರು