ಪರ್ಯಾಯ ಪಕ್ಷ ಸ್ಥಾಪನೆ ಅನಿವಾರ್‍ಯ
ಬೆಂಗಳೂರು, ಜು.೩೦-ರಾಜ್ಯದ ಜನರ ಹಿತ ರಕ್ಷಣೆಗಾಗಿ ಪರ್ಯಾಯ ಪಕ್ಷವೊಂದು ಸ್ಥಾಪಿಸುವ ತುರ್ತು ಅನಿವಾರ್ಯ ಕಾಣುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿಂದು ಬೆನ್ಸನ್ ಟೌನ್ ನ ತಮ್ಮ ನಿವಾಸದಲ್ಲಿ ಪರ್ಯಾಯ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಕುರಿತು ಸಮಾಜವಾದಿ ಡಾ.ಎಂ.ಪಿ.ನಾಗೇಗೌಡ, ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಶ್ ಸೇರಿದಂತೆ ಪ್ರಮುಖರೊಂದಿಗೆ ಅವರು ಚರ್ಚೆ ನಡೆಸಿದರು.
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ , ಬಿಜೆಪಿ ಮತ್ತು ಜೆಡಿಎಸ್ ಇತರ ಪಕ್ಷಗಳಿಂದ ಜನರಿಗೆ ನ್ಯಾಯ ದೊರೆಯುತ್ತಿಲ್ಲ. ಎಲ್ಲವೂ ನಾಟಕೀಯ ರೂಪದ ಭಾಗವಾಗಿ ನಡೆದುಕೊಳ್ಳುತ್ತಿವೆ.ಹಾಗಾಗಿ ರಾಜ್ಯಕ್ಕೆ ಒಂದು ಹೊಸ ಪರ್ಯಾಯ ಪಕ್ಷ ಸ್ಥಾಪಿಸಲು ನಿರ್ಧರ ಮಾಡಬೇಕು ಎಂದರು.
ರಾಜ್ಯದ ಜನರು ಸಹ ಪರ್ಯಾಯ ರಾಜಕೀಯ ಪಕ್ಷ ಅಗತ್ಯವಿದೆ ಎನ್ನುವ ಕೂಗು ಇಟ್ಟಿದ್ದಾರೆ. ಅದರ ಪರಿಣಾಮವಾಗಿ ಇಂದು ಸಭೆಯನ್ನು ಕರೆಯಲಾಗಿತ್ತು. ಇಂತಹ ನಿರ್ಧಾರಕ್ಕೆ ಬಿಜೆಪಿ ,ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಪ್ರಭಾವಿ ಸಮುದಾಯ ಶಾಸಕರು ಬೆಂಬಲವನ್ನು ಸೂಚಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಮೂರನೇ ಪಕ್ಷ ಬೇಕಾಗಿದೆ ಅದಕ್ಕಾಗಿ ನಾವು ನಿಮ್ಮ ಜೊತೆ ಮುಂದಿನ ದಿನಗಳಲ್ಲಿ ಬೆಂಬಲವನ್ನು ಸೂಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ನಾಗೇಶ್ ಹೇಳಿದರು.