ವಿಜಯೇಂದ್ರ ಬಿಜೆಪಿ ಕಾಲಾವಧಿಯ ಹಗರಣಗಳ ಬಗ್ಗೆ ಮಾತನಾಡಲಿ:ಸಚಿವ ಎಂ.ಬಿ. ಪಾಟೀಲ
ವಿಜಯಪುರ,ಜು.28:ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಡಾದ ಆರೋಪಕ್ಕೂ ಮೊದಲೂ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳ ಬಗ್ಗೆ ಮಾತನಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ದ ತಾಜವಾವಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರ ಜೊತೆಗೆ ಮಾತನಾಡಿ, ಮುಡಾದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಖಂಡಿಸಿ ಪಾದಯಾತ್ರೆ ಮಾಡುವುದಾಗಿ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ ಟಾಂಗ್ ನೀಡಿದರು.
ಕೋವಿಡ್ ನಲ್ಲಿ ಆದ ಭ್ರಷ್ಟಚಾರದ ತನಿಖೆಯಾಗಲಿ.
ಭೋವಿ ನಿಗಮ ಹಾಗೂ ಇತರೆ ಹಗರಣಗಳ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.
ಕೋವಿಡ್ ಹಗರಣ ಕುರಿತ ವಿಜಯಪುರ ನಗರ ಶಾಸಕ ಯತ್ನಾಳ ಆರೋಪ ಮಾಡಿದ್ದಾರೆ.
ಯಡಿಯೂರಪ್ಪ ಹಾಗೂ ಅವರ ಪುತ್ರ ಮಾರಿಷಸ್ ನಲ್ಲಿ 10 ಸಾವಿರ ಕೋಟಿ ಇಟ್ಟಿದ್ದಾರೆಂದು ಯತ್ನಾಳ ಆರೋಪಿಸಿದ್ದಾರೆ.
ಯತ್ನಾಳ ವಿಜಯಪುರದವರು
ವಿಜಯಪುರದವರು ಸುಳ್ಳು ಹೇಳಲ್ಲ. ಯತ್ನಾಳ ಆರೋಪ ಕುರಿತು ವಿಜಯೇಂದ್ರ ಮಾತನಾಡಲಿ. ನಂತರ ಪಾದಯಾತ್ರೆ ಮಾಡಲಿ ಎಂದು ಹೇಳಿದರು.