ಕೋಚಿಂಗ್ ಸೆಂಟರ್ ಸಾವು, ಸಾಮೂಹಿಕ ವೈಫಲ್ಯ
ನವದೆಹಲಿ,ಜು.೨೮- ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಮೂರು ಮಂದಿ ವಿದ್ಯಾರ್ಥಿಗಳ ಸಾವು ದೇಶದ ’ವ್ಯವಸ್ಥೆಯ ಸಾಮೂಹಿಕ ವೈಫಲ್ಯ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ
ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯು ಸರ್ಕಾರಗಳ ಜವಾಬ್ದಾರಿಯಾಗಿದೆ ಅದನ್ನು ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ
ದೆಹಲಿಯ ಓಲ್ಡ್ ರಾಜಿಂದರ್ ನಗರ ಪ್ರದೇಶದ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಜಲಪ್ರಳಕ್ಕೆ ಸಿಲುಕಿ ಮೂವರು ವಿದ್ಯಾರ್ಥಿಗಳ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಅವರು ಇದು “ವ್ಯವಸ್ಥೆಯ ಸಾಮೂಹಿಕ ವೈಫಲ್ಯ” ಎಂದು ಹೇಳಿದ್ದಾರೆ
“ದೆಹಲಿಯಲ್ಲಿ ಕಟ್ಟಡದ ನೆಲಮಾಳಿಗೆ ಜಲಾವೃತಗೊಂಡು ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಸಾವು ಅತ್ಯಂತ ದುರದೃಷ್ಟಕರವಾಗಿದೆ. ಕೆಲವು ದಿನಗಳ ಹಿಂದೆ, ಮಳೆಯ ಸಂದರ್ಭದಲ್ಲಿ ವಿದ್ಯುತ್ ಆಘಾತದಿಂದ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ಧಾರೆ
“ಮೂಲಸೌಕರ್ಯಗಳ ಕುಸಿತ ವ್ಯವಸ್ಥೆಯ ಸಾಮೂಹಿಕ ವೈಫಲ್ಯವಾಗಿದೆ. ಸಾಮಾನ್ಯ ನಾಗರಿಕನು ತನ್ನ ಜೀವನವನ್ನು ಕಳೆದುಕೊಳ್ಳುವ ಮೂಲಕ ಅಸುರಕ್ಷಿತ ವಾತಾವರಣ ನಿರ್ಮಾಣ, ಕಳಪೆ ನಗರ ಯೋಜನೆ ಮತ್ತು ಸಂಸ್ಥೆಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದಿದ್ದಾರೆ
ಓಲ್ಡ್ ರಾಜಿಂದರ್ ನಗರದಲ್ಲಿನ ರಾವ್ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯಲ್ಲಿ ನೀರು ತುಂಬಿದ್ದರಿಂದ ಮೂವರು ವಿದ್ಯಾರ್ಥಿಗಳಾದ ತಾನಿಯಾ ಸೋನಿ (೨೫), ಶ್ರೇಯಾ ಯಾದವ್ (೨೫), ಮತ್ತು ನೆವಿನ್ ಡಾಲ್ವಿನ್ (೨೮) ಸಾವನ್ನಪ್ಪಿದ್ದಾರೆ. ನೆಲಮಾಳಿಗೆಯು ಗ್ರಂಥಾಲಯ ಹೊಂದಿತ್ತು, ಅಲ್ಲಿ ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೋಚಿಂಗ್ ಸೆಂಟರ್‌ನ ಮಾಲೀಕ ಅಭಿಷೇಕ್ ಗುಪ್ತಾ ಮತ್ತು ಸಂಯೋಜಕ ದೇಶಪಾಲ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ನಿರ್ದಾಕ್ಷಿಣ್ಯ ನರಹತ್ಯೆ ಮತ್ತು ನಿರ್ಲಕ್ಷ?ಯದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.