ದರ್ಶನ್‌ಗೆ ಯೋಗ ಧ್ಯಾನ ಹೇಳಿಕೊಟ್ಟೆ ಎಂದಿದ್ದ ಕೈದಿ ಸಿದ್ಧಾರೂಢಗೆ ನೋಟೀಸ್
ಬೆಂಗಳೂರು,ಜು.೨೮- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನ ಕಂಬಿ ಎಣಿಸುತ್ತಿರುವ ನಟ ದರ್ಶನ್‌ನನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದ ಕೈದಿ ಸಿದ್ಧಾರೂಢ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.
ಸನ್ನಡತೆ ಆಧಾರದಲ್ಲಿ ಇನ್ನೇನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಬೇಕಿದ್ದ ಸಿದ್ಧಾರೂಢ ಅವರು ದರ್ಶನ್‌ನ ಭೇಟಿ ಮಾಡಲೇಬೇಕು ಎನ್ನುವ ಆಸೆ ಹೊಂದಿದ್ದರು.
ಅದಕ್ಕಾಗಿ ಅವರು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು ಎನ್ನಲಾಗಿತ್ತು. ಇದಕ್ಕೆ ಜೈಲು ಅಧಿಕಾರಿ ಕೂಡ ಒಪ್ಪಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಸಿದ್ಧರೂಢರನ್ನು ಭೇಟಿಯಾಗಲು ದರ್ಶನ್ ಒಪ್ಪುತ್ತಾರಾ ಅವರಿಗೆ ಮನಸಿದೆಯಾ ಎಂದು ಅಧಿಕಾರಿಗಳು ದರ್ಶನ್‌ನ ಕೇಳಿದ್ದರು. ಆದರೆ ದರ್ಶನ್ ಹಿಂದೂ ಮುಂದೂ ನೋಡಲೇ ಇಲ್ಲ. ಒಂಚೂರು ಯೋಚನೆ ಮಾಡದೇ ತನ್ನನ್ನು ಭೇಟಿಯಾಗಲು ಬಯಸುತ್ತಿರುವ ಅಭಿಮಾನಿಯ ಭೇಟಿಗೆ ಒಪ್ಪಿಕೊಂಡು ಸಿದ್ಧಾರೂಢ ಅವರನ್ನು ಒಳ ಕಳುಹಿಸುವಂತೆ ಹೇಳಿದ್ದರುಎನ್ನಲಾಗಿತ್ತು.
ಸಿದ್ಧಾರೂಢ, ತಾವು ದರ್ಶನ್ ಅನ್ನು ಜೈಲಿನಲ್ಲಿ ಭೇಟಿಯಾಗಿದ್ದು, ದರ್ಶನ್‌ಗೆ ಯೋಗ, ಧ್ಯಾನ ಹೇಳಿಕೊಟ್ಟು ಅವರೊಟ್ಟಿಗೆ ಕೆಲ ಸಮಯ ಮಾತನಾಡಿದೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಅನ್ನು ಸಿದ್ಧಾರೂಡ ಭೇಟಿ ಆಗಿಲ್ಲ ಎಂದಿದ್ದು, ಪೊಲೀಸ್ ಇಲಾಖೆಯು ಸಿದ್ಧಾರೂಢಗೆ ನೋಟಿಸ್ ಜಾರಿ ಮಾಡಿದೆ.
ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲು ಅಧಿಕಾರಿಗಳು
ಜೈಲಲ್ಲಿ ನಟ ದರ್ಶನ್ ಭೇಟಿಯಾಗದೆ ಸಿದ್ದರೂಢ ಸುಳ್ಳು ಕಥೆ ಕಟ್ಟಿದ್ದಾರೆ ಎನ್ನಲಾಗಿದೆ. ದರ್ಶನ್ ಭೇಟಿ ಮಾಡಿಸಲೇ ಇಲ್ಲವೆಂದು ಕಾರಾಗೃಹ ಇಲಾಖೆಗೆ ಜೈಲಾಧಿಕಾರಿಗಳು ವರದ ನೀಡಿದ್ದಾರೆ. ಸನ್ನಡತೆ ಮೇಲೆ ಬಿಡುಗಡೆಯಾಗಿರುವ ಸಿದ್ದರೂಢ ಮಾಧ್ಯಮ ಹೇಳಿಕೆ ಬಗ್ಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದಾರೆ. ಜೈಲು ಅಧಿಕಾರಿಗಳು, ದರ್ಶನ್ ಭೇಟಿಗೆ ಯಾವುದೇ ಬೇರೆ ಕೈದಿಗಳಿಗೆ ವಿಶೇಷವಾಗಿ ಜೈಲು ಸೆಲ್‌ನೊಳಗೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ಹಾಗಾಗಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದೆ.