ನಟ ದರ್ಶನ್ ಗಿಲ್ಲ ಮನೆಯೂಟ ಭಾಗ್ಯ: ಎಸಿಎಂ ಕೋರ್ಟ್ ನಲ್ಲಿ ಅರ್ಜಿ ವಜಾ
ಬೆಂಗಳೂರು, ಜು.26- ನಟ ದರ್ಶನ್‌ ಅವರು ಮನೆ ಊಟಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 24ನೇ ಎಸಿಎಂಎಂ ನ್ಯಾಯಾಲಯ ಇಂದು ವಜಾಗೊಳಿಸಿದೆ. ಹೀಗಾಗಿ ದರ್ಶನ್ ಜೈಲೂಟ ಖಾಯಂ ಆಗಿದೆ.
ಆರೋಪಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಲಯ, ದರ್ಶನ್ ಅರ್ಜಿಯನ್ನು ವಜಾ ಮಾಡಿದೆ.
ಜೈಲಿನಲ್ಲಿ ನೀಡುತ್ತಿರುವ ಆಹಾರ ಸೇವಿಸೊ ಜೀರ್ಣಿಸಿಕೊಳ್ಳಲಾಗದೆ ಅತಿಸಾರ ಉಂಟಾಗಿದ್ದು, ಪದೇ ಪದೆ ಭೇದಿಯಾಗುತ್ತಿದೆ.
ಪರಿಣಾಮ ದೇಹದ ತೂಕ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಆಹಾರದೊಂದಿಗೆ ಹಾಸಿಗೆ, ಪುಸ್ತಕಗಳನ್ನ ತರಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದೆ. ಆದರೆ, ಅವರು ಇದಕ್ಕೆ ಒಪ್ಪಿರಲಿಲ್ಲ ಎಂದಿದ್ದ ದರ್ಶನ್, ಅನುಮತಿ ಕಲ್ಪಿಸುವಂತೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಾದ ಆಲಿಸಿದ ನ್ಯಾಯಾಲಯವು ಇಂದಿಗೆ ತೀರ್ಪನ್ನು ಜುಲೈ ಕಾಯ್ದಿರಿಸಿತ್ತು. ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದೆ.