ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ವಾಗ್ದಾಳಿ
ವಾಷಿಂಗ್ಟನ್, ಜು.೨೪- ಅಮೆರಿಕದ ಅದ್ಯಕ್ಷೀಯ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು ಪ್ರತಿ ಸ್ಪರ್ಧಿ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ವಿರುದ್ದ ಹಾಲಿ ಅಧ್ಯಕ್ಷೆ ಹಾಗೂ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಿಲ್ವಾಕೀ, ವಿಸ್ಕಾನ್ಸಿನ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಮಲಾ ಹ್ಯಾರೀಸ್ ಅವರು ತಮ್ಮ ಭಾಷಣದುದ್ದಕ್ಕೂ ಡೋನಾಲ್ಡ್ ಟ್ರಂಪ್ ಅವರ ದುರ್ಬಲತೆಯನ್ನು ಪಟ್ಟಿ ಮಾಡಿ ತರಾಟೆಗೆ ತೆಗೆದುಕೊಂಡರು.
ಟ್ರಂಪ್ ವಿರುದ್ಧ ಮಾತಿನ ಸಮರ ನಡೆಸಿದ ಕಮಲಾ ಹ್ಯಾರಿಸ್ ಅವರು ಡೋನಾಲ್ಡ್ ಟ್ರಂಪ್ ಅವರ ಕಾಲದಲ್ಲಿ ದೇಶ ಹಲವು ರಂಗಗಳಲ್ಲಿ ಹಿಂದುಳಿದಿತ್ತು, ಜೋ ಬೈಡೆನ್ ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ಮೇಲೆ ಎತ್ತುವ ಕೆಲಸ ಮಾಡಿದ್ದೇವೆ. ಮುಂದೆಯೂ ಅಮೇರಿಕಾವನ್ನು ಎತ್ತರಕ್ಕೆ ಕೊಂಡೊಯ್ಯುವ ಕನಸು ನಮ್ಮದು ಎಂದಿದ್ದಾರೆ.
ಅಮೇರಿಕಾದ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಚುನಾಯಿತರಾದರೆ ಹಿಂಸಾಚಾರ ಹೆಚ್ಚಾಗಲಿದೆ. ಅಭಿವೃದ್ಧಿಗಿಂತ ಪ್ರತಿಭಟನೆಗಳೇ ನಡೆಯಲಿವೆ ಇದಕ್ಕೆ ದೇಶದ ಜನರು ಅವಕಾಶ ಮಾಡಿಕೊಡಬಾರದು ಎಂದಿದ್ದಾರೆ.
ಈ ವರ್ಷ ನವೆಂಬರ್ ೫ ರಂದು ಅಧ್ಯಕ್ಷರಾಗಿ ರಿಪಬ್ಲಿಕನ್ ಅಭ್ಯರ್ಥಿಯಾದ ಡೋನಾಲ್ಡ್ ಟ್ರಂಪ್ ವಿರುದ್ದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ವಾಗ್ದಾಳಿ ನಡೆಸಿ ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
“ಡೋನಾಲ್ಡ್ ಟ್ರಂಪ್ ನಮ್ಮ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಬಯಸುತ್ತಾರೆ” ಎಂದು ಅವರು ವಿಸ್ಕಾನ್ಸಿನ್‌ನ ಮಿಲ್ವಾಕೀ ಉಪನಗರದಲ್ಲಿರುವ ವೆಸ್ಟ್ ಅಲಿಸ್ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಹಲವಾರು ಸಾವಿರ ಜನರ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಇದು ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಯುದ್ಧಭೂಮಿ ರಾಜ್ಯವಾಗಿದೆ ಎಂದು ತಿಳಿಸಿದ್ದಾರೆ.
“ನಾವು ಸ್ವಾತಂತ್ರ್ಯ, ಸಹಾನುಭೂತಿ ಮತ್ತು ಕಾನೂನಿನ ಆಳ್ವಿಕೆಯ ದೇಶದಲ್ಲಿ ಅಥವಾ ಅವ್ಯವಸ್ಥೆ, ಭಯ ಮತ್ತು ದ್ವೇಷದ ದೇಶದಲ್ಲಿ ಬದುಕಲು ಬಯಸುತ್ತೇವೆಯೇ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದಿದ್ದಾರೆ.